ಗಂಗಾವತಿ: ಕೃಷಿ ವಿಜ್ಞಾನ ಕೇಂದ್ರ ಜ್ಞಾನ ಭಂಡಾರದ ಸಂಕೇತವಾಗಿದ್ದು, ಪೌಷ್ಟಿಕ ಆಹಾರ ಭದ್ರತೆ ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸುತ್ತಿದೆ ಎಂದು ರಾಯಚೂರು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎ.ಆರ್ ಕುರುಬರ್ ಹೇಳಿದರು.
ಇದನ್ನೂ ಓದಿ:ಸಾವಯವ ಕೃಷಿಗೆ ಆದ್ಯತೆ ನೀಡಿ
ಕೃಷಿ ವಿಜ್ಞಾನ ಕೇಂದ್ರ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಿನ್ನೆಲೆ ನಗರಕ್ಕೆ ಆಗಮಿಸಿದ ಗೋಲ್ಡನ್ ಜ್ಯುಬಿಲಿ ಜ್ಯೋತಿ ಯಾತ್ರೆಯಲ್ಲಿ ಗುರುವಾರ ಮಾತನಾಡಿದರು.
1974ರಲ್ಲಿ ಆರಂಭವಾದ ಕೆವಿಕೆಯಿಂದ ಮಹತ್ತರವಾದ ಯೋಜನೆಗಳು ಜಾರಿಗೊಂಡಿದ್ದು, ಆಹಾರ ಕೊರತೆ ನಿವಾರಿಸಲು ಪ್ರಮುಖ ಪಾತ್ರವಹಿಸಿದೆ. ಕಷಿ ಸಖಿಯರು ಕೆವಿಕೆ ಅಂಬಾಸಿಡರ್‌ಗಳಾಗಿದ್ದು, ರೈತರಿಗೆ ಕಷಿ ವಿಸ್ತರಣಾ ಸೇವೆ ಒದಗಿಸಲು ಇವರ ಕರ್ತವ್ಯ ಮುಖ್ಯವಾಗಿದೆ ಎಂದರು.
ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಮಾತನಾಡಿ, ಕಷಿ ಉತ್ಪಾದನೆ ಸ್ಥಳೀಯ ಸಮಸ್ಯೆಗಳಿಗೆ ಕೆವಿಕೆ ಪರಿಹಾರ ಕಂಡುಕೊಳ್ಳುತ್ತಿದ್ದು, ಗುಣಮಟ್ಟದ ಬೀಜ, ಸಸಿ ಹಾಗೂ ಕಷಿ ಪರಿಕರ ವಿತರಣೆ ಜತೆಗೆ ಸ್ವ ಉದ್ಯೋಗ ಕೌಶಲ್ಯ ತರಬೇತಿ ನೀಡುತ್ತಿದೆ.
50ವರ್ಷ ಪೂರೈಸಿದ ನಿಮಿತ್ತ ಜ್ಯೋತಿ ಯಾತ್ರೆ ದೇಶದಾದ್ಯಂತ ಆರಂಭವಾಗಿದ್ದು, ಬಳ್ಳಾರಿ ಜಿಲ್ಲೆಯಿಂದ ಆಗಮಿಸಿದ ಜ್ಯೋತಿ ಯಾತ್ರೆಯನ್ನು ಗದಗ ಜಿಲ್ಲೆಯ ಹುಲಕೋಟಿಗೆ ಕಳುಹಿಸಿಕೊಡಲಾಯಿತು ಎಂದರು.
ಸರ್ಕಾರಿ ಕೃಷಿ ಕಾಲೇಜು ಪ್ರಭಾರ ವಿಶೇಷಾಧಿಕಾರಿ ಡಾ.ಕಿರಣಕುಮಾರ, ಕೃಷಿಕ ಸಮಾಜದ ತಾಲೂಕಾಧ್ಯಕ್ಷ ಡಾ.ಗೋವಿಂದಪ್ಪ, ಜಿಲ್ಲಾ ಕೃಷಿ ತರಬೇತಿ ಸಹಾಯ ನಿರ್ದೇಶಕ ಡಾ.ಚಂದ್ರಕಾಂತ ನಾಡಗೌಡ ಇತರರಿದ್ದರು.