ಹುಕ್ಕೇರಿ: ತಾಲೂಕು ಕೃಷಿಕ ಸಮಾಜ ಕಾರ್ಯಕಾರಿಣಿ ಸಮಿತಿಗೆ ಮಂಗಳವಾರ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ಜರುಗಿತು.
ಸ್ಥಳೀಯ ಕೃಷಿ ಇಲಾಖೆ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ತಾಲೂಕಾಧ್ಯಕ್ಷರಾಗಿ ಬಿ.ಕೆ.ಮಗೆಣ್ಣವರ, ಉಪಾಧ್ಯಕ್ಷರಾಗಿ ಸಂಜಯ ಹುದಲಿಮಠ, ಪ್ರಧಾನ ಕಾರ್ಯದರ್ಶಿಯಾಗಿ ಅಪ್ಪಣ್ಣ ಬಡಿಗೇರ, ಖಜಾಂಚಿಯಾಗಿ ಪರಪ್ಪ ಮಗದುಮ್ಮ, ಜಿಲ್ಲಾ ಪ್ರತಿನಿಧಿಯಾಗಿ ಸತ್ಯಪ್ಪ ನಾಯಿಕ, ಸಮಿತಿ ಸದಸ್ಯರಾಗಿ ಕೆಂಪಣ್ಣ ವಾಸೇದಾರ, ಅಶೋಕ ನಾಯಿಕ, ಕೆಂಪಣ್ಣ ಸನದಿ, ರಾಮಣ್ಣ ಬಾತಿ, ಸಂಜು ಕಂಠಿ, ಜಿನಗೌಡ ಇಮಗೌಡನವರ, ಮಯೂರ ಗಸ್ತಿ, ದಸ್ತಗೀರ್ ತಹಸೀಲ್ದಾರ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಆರ್.ಬಿ.ನಾಯ್ಕರ, ಸುರೇಖಾ ಕುರಬೇಟ ಘೋಷಿಸಿದರು.
ವಕೀಲರಾದ ಭೀಮಸೇನ ಬಾಗಿ, ಡಿ.ಕೆ.ಅವರಗೋಳ ಇತರರಿದ್ದರು.