ಸಮಗ್ರ ಕೃಷಿ ಪದ್ಧತಿಯಿಂದ ನಷ್ಟ ದೂರ; ಮಂಜುನಾಥ

blank

ರಾಣೆಬೆನ್ನೂರ: ಸಮಗ್ರ ಕೃಷಿ ಪದ್ಧತಿಯಿಂದ ರೈತರಿಗೆ ನಷ್ಟ ಎಂಬುದನ್ನು ದೂರ ಮಾಡಬಹುದು. ಸಮಗ್ರ ಕೃಷಿಯಲ್ಲಿ ಎಲ್ಲ ತರಹದ ಬೆಳೆಗಳು ಬೆಳೆಯಬೇಕು. ಕುರಿ, ಕೋಳಿ, ಎತ್ತು, ಎಮ್ಮೆ ಸಾಕಬೇಕು. ತೋಟಗಾರಿಕೆ ಹಾಗೂ ಹೈನುಗಾರಿಕೆ ರೂಢಿಸಿಕೊಂಡರೆ ಕೃಷಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಕೃಷಿ ವಿಜ್ಞಾನಿ ಹಾಗೂ ನಿವೃತ್ತ ಪ್ರೊ. ಮಂಜುನಾಥ ಎಲ್​. ಹೇಳಿದರು.
ತಾಲೂಕು ಕೃಷಿ ಕಾರ್ಯಾಲಯ, ತಾಲೂಕು ಕೃಷಿಕ ಸಮಾಜ, ಆತ್ಮ ಯೋಜನೆ ವತಿಯಿಂದ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್​ ಅವರ ಜನ್ಮದಿನದ ನಿಮಿತ್ತ ನಗರದ ಕೃಷಿ ಇಲಾಖೆ ಕಾರ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ರೈತ ದಿನಾಚರಣೆ ಸಮಾರಂಭದಲ್ಲಿ ಅವರು ಸಮಗ್ರ ಕೃಷಿ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಒಕ್ಕಲಿಗ ಮಾತ್ರ ದೇಶವನ್ನು ಸಾಕಬಲ್ಲ. ಯಾವ ಗ್ರಾಮದಲ್ಲಿ ಒಕ್ಕಲುತನ ಇಡೀ ಕುಟುಂಬದ ಉದ್ಯೋಗ ಆಗಿದೆಯೋ ಆ ಗ್ರಾಮ ಅಭಿವೃದ್ಧಿ ಹೊಂದಿದೆ. ಕೃಷಿ ರೈತರು ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಆದರೆ, ಇಂದಿನ ರೈತರು ಬಹಳಷ್ಟು ಸಮಸ್ಯೆ ಎದುರಿಸಬೇಕಾಗಿದೆ. ಬೀಜ, ಗೊಬ್ಬರ ಕೊರತೆ, ಬೆಲೆ ಏರಿಕೆ, ಕೂಲಿ ಕಾಮಿರ್ಕರ ಸಮಸ್ಯೆ ಹಾಗೂ ಮಕ್ಕಳು ಗ್ರಾಮೀಣ ಬಿಟ್ಟು ಸಿಟಿ ಕಡೆಗೆ ವಾಲುತ್ತಿರುವುದು ಸೇರಿ ನಾನಾ ಕಷ್ಟ ಎದುರಿಸಬೇಕಿದೆ. ಹೀಗಾದರೆ ಪರಿಸ್ಥಿತಿ ಗಂಭೀರ ಆಗಲಿದೆ ಎಂದರು.
ಅಡಕೆ ಬೆಳೆ ಕೆಲಸ ಕಡಿಮೆ ಲಾಭ ಜಸ್ತಿ ಒಪ್ಪುತ್ತೇನೆ. ಆದರೆ ಇದರಿಂದ ಗುಟ್ಕಾ ಫ್ಯಾಕ್ಟರಿ ಹೆಚ್ಚಾಗುತ್ತಿವೆ. ಇದು ಯುವ ಪೀಳಿಗೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಮುಂದಿನ ಪೀಳಿಗೆಗೆ ನೀರಿನ ಕೊರತೆ ಸೇರಿ ಹಲವಾರು ಸಮಸ್ಯೆ ಎದುರಾಗುತ್ತದೆ. ಇಂದಿನ ದಿನದಲ್ಲಿ ಆಹಾರದ ಸದ್ಭಳಿಕೆ ಆಗಬೇಕು. ಜಗತ್ತಿನಲ್ಲಿ ಒಂದು ವರ್ಷಕ್ಕೆ 1 ಬಿಲಿಯನ್​ ಟನ್​ ಆಹಾರ ವ್ಯರ್ಥ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಒಂದು ವರ್ಷಕ್ಕೆ 300 ಕೋಟಿ ರೂ. ಆಹಾರ ತಿಪ್ಪೆಗೆ ಹಾಕುತ್ತಿದ್ದೇವೆ. ಇದೆಲ್ಲ ಬದಲಾಗಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಮಾತನಾಡಿ, ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್​ ಅವರು ಜಮೀನ್ದಾರ್​ ಪದ್ಧತಿ ಹೋಗಲಾಡಿಸಿದ್ದು, ಹಸಿರು ಕ್ರಾಂತಿ, ನೀರಾವರಿ ಸೇರಿ ರೈತರ ಪರವಾಗಿ ಹಲವಾರು ಯೋಜನೆ ಜಾರಿ ಮಾಡಿದ್ದರಿಂದ ರೈತರ ಅಭಿವೃದ್ಧಿ ಸಾಧ್ಯವಾಗಿದೆ.
ರೈತ ದಿನಾಚರಣೆ ತಾಲೂಕು ಮಟ್ಟದಲ್ಲಿ ಮಾತ್ರವಲ್ಲದೆ ಹೋಬಳಿ, ಗ್ರಾಪಂ ಮಟ್ಟದಲ್ಲಿ ರೈತ ದಿನ ಆಚರಿಸುವಂತಾಗಬೇಕು. ತಾಲೂಕಿನಲ್ಲಿ ರೈತರಿಗೆ ಕಡಿಮೆ ಬೆಲೆಯಲ್ಲಿ ಕೃಷಿ ಯಂತ್ರಗಳನ್ನು ಒದಗಿಸುವ ಉದ್ದೇಶದಿಂದ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಹಾರ್ವೇಸ್ಟಾರ್​ ಹಬ್ಬ ಎಂಬ ಯೋಜನೆ ಜಾರಿಗೆ ಮಾಡುತ್ತಿದ್ದೇವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಚ್​. ಪಾಟೀಲ, ಉಪ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ, ರೈತ ಮುಖಂಡರಾದ ಹನುಂಮತಪ್ಪ ಕಬ್ಬಾರ, ಸುರೇಶ ಮೈದೂರ, ರವೀಂದ್ರಗೌಡ ಪಾಟೀಲ, ಬಸವರಾಜ ಕಡೂರ, ಕೃಷ್ಣಮೂತಿರ್ ಲಮಾಣಿ, ಶಂಕ್ರಪ್ಪ ಮೆಣಸಿನಹಾಳ, ದೇವರಾಜ ಕೋರಿ, ಜಗದೀಶ ಹುಲಗೂರ ಮತ್ತಿತರರು ಉಪಸ್ಥಿತರಿದ್ದರು.

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…