ಮೂರು ಚಿನ್ನದ ಪದಕ ಪಡೆದ ಅಕ್ಷಯ್

ಹೊಸಪೇಟೆ: ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ನಗರದ ವಿದ್ಯಾರ್ಥಿ ಎಂ.ಅಕ್ಷಯ್ ಕುಮಾರ್ ಬಿಎಸ್ಸಿ ಕೃಷಿ ಪದವಿಯಲ್ಲಿ 3 ಚಿನ್ನದ ಪದಕ ಪಡೆದಿದ್ದಾರೆ.

ಕೃಷಿ ವಿವಿಯಲ್ಲಿ ನಡೆದ 8ನೇ ಘಟಿಕೋತ್ಸವದಲ್ಲಿ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಕುಲಪತಿ ಡಾ.ಕೆ.ಎಸ್.ಕಟ್ಟಿಮನಿ ಸೇರಿ ಇತರರು ಪ್ರಮಾಣ ಪತ್ರ ನೀಡಿದ್ದಾರೆ.

ನಗರದ ರೈತ ಮುದ್ಲಾಪುರ ದೊಡ್ಡಯ್ಯ, ಸುಮಂಗಲಾ ಪುತ್ರ ಎಂ. ಅಕ್ಷಯ್‌ಕುಮಾರ್, ಬಿಎಸ್ಸಿ ಕೃಷಿ ಪದವಿಯಲ್ಲಿ ಶೇ 9.22 ಕ್ಯುಮುಲೇಟಿವ್ ಗ್ರೇಡ್ ಪಾಯಿಂಟ್ ಎವರೇಜ್(ಸಿಜಿಪಿಎ) ಅಂಕಗಳಿಸುವ ಮೂಲಕ ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿರುವುದಾಗಿ ವಿವಿ ಕುಲಪತಿ ಡಾ.ಕೆ.ಎಸ್.ಕಟ್ಟಿಮನಿ ಘಟಿಕೋತ್ಸವದಲ್ಲಿ ಪ್ರಕಟಿಸಿದ್ದಾರೆ. ಎಂ.ಅಕ್ಷಯ್ ಕುಮಾರ್ ಅವರು ಪ್ರಸ್ತುತ ರಾಯಚೂರು ಕೃಷಿ ವಿವಿಯಲ್ಲಿ ಎಂಎಸ್ಸಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ಧಾರೆ.