ಕೃಷಿ ಬದುಕು ನಶಿಸಿದರೆ ಧರ್ಮ, ಸಂಸ್ಕೃತಿಯ ಅವನತಿ…

Krushi

ಈಶ್ವರ್​ ಚಿಟ್ಪಾಡಿ ಅಭಿಪ್ರಾಯ

ಚಿಂತನಮಂಥನ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ
ಕಾಲ ಬದಲಾವಣೆಯ ಹೊಡೆತ ಕೃಷಿ ಬದುಕನ್ನೂ ಘಾಸಿ ಮಾಡುತ್ತಿದೆ. ಆದರೂ ನಮ್ಮೆಲ್ಲರ ಜೀವನ ಕೃಷಿಯೊಂದಿಗೆ ಜೋಡಿಸಿಕೊಂಡಿದೆ. ಕೃಷಿ ಬದುಕು ಉಳಿದರೆ ಮಾತ್ರ ನಮ್ಮ ಧರ್ಮ ಹಾಗೂ ಸಂಸ್ಕೃತಿ ಉಳಿಯಲಿವೆ. ಇಲ್ಲದಿದ್ದರೆ ಅವು ಅವನತಿಯ ಹಂತ ತಲುಪಲಿದೆ ಎಂದು ಸಿರಿ ತುಳು ಚಾವಡಿಯ ಗುರಿಕಾರ ಈಶ್ವರ್​ ಚಿಟ್ಪಾಡಿ ಅಭಿಪ್ರಾಯಪಟ್ಟರು.

ಉಡುಪಿ ಜಿಲ್ಲಾ ಕೃಷಿಕ ಸಂಘವು ಶ್ರೀ ಭಗವಾನ್​ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೃಷಿ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀ ಭಗವಾನ್​ ನಿತ್ಯಾನಂದ ಸ್ವಾಮಿ ಮಂದಿರದ ಟ್ರಸ್ಟಿ ಕೆ.ದಿವಾಕರ್​ ಶೆಟ್ಟಿ ಕೊಡವೂರು ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು.

ಪಾಂಡುರಂಗ ನಾಯಕ್​ ಹಿರಿಯಡ್ಕ, ಸುರೇಶ್​ ನಾಯಕ್​ ಅಲೆವೂರು, ಲಕ್ಷ್ಮೀನಾರಾಯಣ ಉಪಾಧ್ಯಾಯ, ರಮೇಶ್​ ಪೂಜಾರಿ ಹುಣ್ಸೆಮಕ್ಕಿ, ಭಾರತಿ ಶೆಟ್ಟಿ ಅಂಜಾರು, ರೊನಾಲ್ಡ್​ ಡಿಸೋಜಾ ಆನಗಳ್ಳಿ, ರವೀಂದ್ರ ಪೂಜಾರಿ ಶೀಂಬ್ರ, ಸುಬ್ರಹ್ಮಣ್ಯ ಶ್ರೀಯಾನ್​, ಜಯಲಕ್ಷ್ಮೀ ಪಿತ್ರೋಡಿ, ವಿಠ್ಠಲ್​ ನಾಯಕ್​ ಕೊಡಂಗಳ, ಜೋಸೆಫ್​ ಕುಂದರ್​, ಕಾಮೆಲ್​ ಸಿಕ್ವೇರಾ ಮಣಿಪುರ ಇತರರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ಶ್ರೀನಿವಾಸ್​ ಬಲ್ಲಾಳ್​ ಮಲ್ಲಂಪಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ್​ ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

Share This Article

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…