ರಾಯಚೂರು ನಗರದ ವಿವಿಧ ಕೃಷಿ ಪರಿಕರಗಳ ಮಾರಾಟ ಅಂಗಡಿಗಳಿಗೆ ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ದೀಪಾ ಕುಲಕರ್ಣಿ ಶುಕ್ರವಾರ ಭೇಟಿ,ಪರಿಶೀಲನೆ ಮಾಡಿದರು.

ನಂತರ ಮಾತನಾಡಿ, ಮುಂಗಾರು ಪ್ರಾರಂಭವಾಗುತ್ತಿರುವುದರಿಅದ ರೈತರಿಗೆ ಅಗತ್ಯವಿರುವ ಬೀಜ,ಗೋಬ್ಬರ, ಕೀಟನಾಶಕ, ಸೇರಿದಂತೆ ಅಗತ್ಯ ಗುಣಮಟ್ಟದ ಕೃಷಿ ಪರಿಕರಗಳ ಅಗತ್ಯ ದಾಸ್ತನ್ನು ಮಾಡಕೊಳ್ಳಿ. ಆನಧಿಕೃತ ತಾಯಾರಿಕ ಸಂಸ್ಥೆಗಳ ಕಳಪೆ ಗುಣಮಟ್ಟದ ಕೃಷಿ ಪರಿಕಾರಗಳನ್ನು ಕಂಡು ಬಂದಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾರಾಟ ಕೇಂದ್ರಗಳಲ್ಲಿ ರೈತರಿಗೆ ಕಾಣುವಂತೆ ತಮ್ಮಲಿರುವ ಬೀಜ, ಗೊಬ್ಬರ .ಕ್ರೀಮಿನಾಶಕಗಳ ದಾಸ್ತನಿನಢ ವಿವರ, ಗರಿಷ್ಟ ಮಾರಾಟ ಬೆಲೆ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಪ್ರದರ್ಶಿಸಬೇಕು. ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ರೈತರು ಖರೀದಿಸಿದ ಬೀಜ ಸೇರಿದಂತೆ ಕೃಷಿ ಪರಿಕಾರಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು ಎಂದು ಖಡಕ್ ಸೂಚನೆ ನೀಡಿದರು.