ಭಾರತ-ಖತಾರ್, ಹಲವಾರು ಸಹಕಾರ ಒಪ್ಪಂದಗಳಿಗೆ ಸಹಿ

ನವದೆಹಲಿ:  ವೀಸಾ, ಸೈಬರ್ ಸ್ಪೇಸ್ ಮತ್ತು ಹೂಡಿಕೆ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವಾರು ಸಹಕಾರ ಒಪ್ಪಂದಗಳಿಗೆ ಭಾರತ ಮತ್ತು ಖತಾರ್ ಶನಿವಾರ ಸಹಿ ಹಾಕಿದವು. ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಖತಾರ್ ಪ್ರಧಾನಿ ಒಪ್ಪಂದದ ಪ್ರತಿಗಳನ್ನು ವಿನಿಮಯ ಮಾಡಿಕೊಂಡರು.

ದೆಹಲಿಯ ಹೈದರಾಬಾದ್ ಹೌಸ್ನಲ್ಲಿ ನಡೆದ ಭಾರತ ಮತ್ತು ಖತಾರ್ ನಡುವಣ ನಿಯೋಗ ಮಟ್ಟದ ಮಾತುಕತೆಗಳಳ ಬಳಿಕ ಒಪ್ಪಂದಗಳಿಗೆ ಸಹಿ ಮಾಡಲಾಯಿತು. ಮಾತುಕತೆಯಲ್ಲಿ ಪ್ರಧಾನಿ ಹಾಗೂ ಗೃಹ ಸಚಿವರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಖತಾರ್ ಪ್ರಧಾನಿ ಷೇಕ್ ಅಬ್ದುಲ್ಲಾ ಬಿನ್ ನಾಸ್ಸೇರ್ ಬಿನ್ ಖಲೀಫಾ ಅಲ್ ಥನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಅವರನ್ನು ಭೇಟಿ ಮಾಡಿದ್ದರು.

ಏಜೆನ್ಸೀಸ್.

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *