ರಾಜಧಾನಿಗೆ ಅಘನಾಶಿನಿ ಕೊಳ್ಳದ ನೀರು?

ತುಮಕೂರು: ಪಶ್ಚಿಮಘಟ್ಟದ ಅಘನಾಶಿನಿ ಕೊಳ್ಳದಿಂದ ಬೆಂಗಳೂರಿಗೆ ನೀರು ಪೂರೈಸಲು ಸಾಧ್ಯವಿದ್ದು, ಮಾರ್ಗಮಧ್ಯೆ ಇರುವ ಗ್ರಾಮಗಳಿಗೂ ಅನುಕೂಲವಾಗಲಿದೆ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

ಈ ನೀರಾವರಿ ಯೋಜನೆಯಿಂದ ಬೆಂಗಳೂರಿಗೆ 60 ಟಿಎಂಸಿ ನೀರು ತರಲು ಸಾಧ್ಯವಿದ್ದು ತಾಂತ್ರಿಕ ವಾಗಿಯೂ ಸಮಂಜಸ ವಾಗಿದೆ. ಪರಿಸರಕ್ಕೆ ಯಾವುದೇ ಹಾನಿಯಾಗದೆ ಬೆಂಗಳೂರು ಸುತ್ತಲ ಜಿಲ್ಲೆಗಳಿಗೂ ಅನುಕೂಲವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯೋಜನೆಸಾಧ್ಯತೆ ಹೇಗೆ?: ಪಶ್ಚಿಮಘಟ್ಟದ ಹೇಮಾಗ್ನಿನಿ ಜಲಾಶಯದಿಂದ ಸಿದ್ಧಾಪುರ, ಸಾಗರ ತಾಲೂಕುಗಳ ಮೂಲಕ ಹಟ್ಟಿಮೂಡನಗೆರೆ ಗ್ರಾಮದ ಬಳಿ ವೇದಾವತಿ ನದಿಯಿಂದ ವಾಣಿವಿಲಾಸ ಸಾಗರಕ್ಕೆ ನೀರು ತರಲು ಸಾಧ್ಯವಿದೆ. ವೇದಾವತಿ ನದಿಯ ಮಟ್ಟ 750 ಮೀ. ಇದ್ದು, 250 ಮೀ. ನೀರು ಲಿಫ್ಟ್ ಮಾಡಬೇಕಾಗುತ್ತದೆ. ಇಲ್ಲಿಂದ ಬೋರನಕಣಿವೆ ಜಲಾಶಯಕ್ಕೆ ಮೂರು ಟಿಎಂಸಿ ನೀರು

ಬರಲಿದೆ. ಗಾಯತ್ರಿ ಜಲಾಶಯ ಹಾಗೂ ತಿಮ್ಮನಹಳ್ಳಿ, ಗಂಟೇನಹಳ್ಳಿ, ಚೇಳೂರು, ಬೆಳ್ಳಾವಿ, ಕೋರಾ, ಕ್ಯಾತಸಂದ್ರ, ದಾಬಸ್​ಪೇಟೆ ಮೂಲಕ ಹೆಸರುಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರನ್ನು ತರಬಹುದಾಗಿದೆ ಎಂದು ಜಯಚಂದ್ರ ತಿಳಿಸಿದರು.

Leave a Reply

Your email address will not be published. Required fields are marked *