ಭಾರತ ಎ ಎದುರು ಕನ್ನಡಿಗ ಪಡಿಕ್ಕಲ್ ಏಕಾಂಗಿ ಹೋರಾಟ: ಸನ್‌ಗ್ಲಾಸ್ ಧರಿಸಿ ಆಡಿದ ಅಯ್ಯರ್ ಟ್ರೋಲ್!

ಅನಂತಪುರ: ನಾಯಕ ಮಯಾಂಕ್ ಅಗರ್ವಾಲ್ (56 ರನ್, 87 ಎಸೆತ, 8 ಬೌಂಡರಿ) ಹಾಗೂ ಪ್ರಥಮ್ ಸಿಂಗ್ (59* ರನ್, 82 ಎಸೆತ, 6 ಬೌಂಡರಿ) ಅವಳಿ ಅರ್ಧಶತಕಗಳ ನೆರವಿನಿಂದ ಭಾರತ ಎ ತಂಡ ಪ್ರತಿಷ್ಠಿಯ ದುಲೀಪ್ ಟ್ರೋಫಿ ದೇಶೀಯ ಟೂರ್ನಿಯಲ್ಲಿ ಭಾರತ ಡಿ ಎದುರಿನ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.

ಅನಂತಪುರದ ಎ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನವಾದ ಶುಕ್ರವಾರ 288 ರನ್‌ಗಳಿಂದ ಆಟ ಮುಂದುವರಿಸಿದ ಭಾರತ ಎ ತಂಡ 84.3 ಓವರ್‌ಗಳಲ್ಲಿ 290 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಕನ್ನಡಿಗ ದೇವದತ್ ಪಡಿಕ್ಕಲ್ (92 ರನ್, 124 ಎಸೆತ, 15 ಬೌಂಡರಿ) ಏಕಾಂಗಿ ಹೋರಾಟದ ನಡುವೆಯೂ ಭಾರತ ಡಿ ತಂಡ 52.1 ಓವರ್‌ಗಳಲ್ಲಿ 183 ರನ್‌ಗಳಿಗೆ ಸರ್ವಪತನ ಕಂಡಿತು.

107 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿರುವ ಎ ತಂಡ ದಿನದಂತ್ಯಕ್ಕೆ 28.1 ಓವರ್‌ಗಳಲ್ಲಿ 1 ವಿಕೆಟ್‌ಗೆ 115 ರನ್ ಕಲೆಹಾಕಿದ್ದು, ಒಟ್ಟಾರೆ 222 ರನ್‌ಗಳ ಮುನ್ನಡೆ ಸಾಧಿಸಿದೆ. ಪ್ರಥಮ್ ಸಿಂಗ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್‌ಗೆ 169 ಎಸೆತಗಳಲ್ಲಿ 115 ರನ್ ಬಾರಿಸಿ ಭದ್ರ ಅಡಿಪಾಯ ಹಾಕಿಕೊಟ್ಟಿದ್ದು, ಮಯಾಂಕ್ ನಿರ್ಗಮನದೊಂದಿಗೆ ದಿನದ ಆಟಕ್ಕೆ ತೆರೆ ಎಳೆಯಲಾಯಿತು. ಶ್ರೇಯಸ್ ಅಯ್ಯರ್ ಈ ಜತೆಯಾಟ ಮುರಿದರು.

ಭಾರತ ಎ: 290 ಹಾಗೂ 1 ವಿಕೆಟ್‌ಗೆ 115 (ಮಯಾಂಕ್ 56, ಪ್ರಥಮ್ ಸಿಂಗ್ 59*, ಶ್ರೇಯಸ್ ಅಯ್ಯರ್ 0ಕ್ಕೆ 1). ಭಾರತ ಡಿ: 52.1 ಓವರ್‌ಗಳಲ್ಲಿ 183 (ಅಥರ್ವ 4, ಶ್ರೇಯಸ್ 0, ಪಡಿಕ್ಕಲ್ 92, ಸ್ಯಾಮ್ಸನ್ 5, ರಿಕಿ ಭುಯ್ 23, ಹರ್ಷಿತ್ 31, ವಿದ್ವತ್ 2*, ಖಲೀಲ್ 39ಕ್ಕೆ 3, ಅಕೀಬ್ 41ಕ್ಕೆ 3).

ಸನ್‌ಗ್ಲಾಸ್ ಧರಿಸಿ ಆಡಿದ ಅಯ್ಯರ್ ಟ್ರೋಲ್!: ಅನಂತಪುರ: ದುಲೀಪ್ ಟ್ರೋಫಿಯಲ್ಲಿ ಭಾರತ ಡಿ ತಂಡದ ಮೊದಲ ಇನಿಂಗ್ಸ್‌ನ 4ನೇ ಎಸೆತದಲ್ಲಿ ಆರಂಭಿಕ ಅಥರ್ವ ತೈಡೆ ಔಟಾದ ಬಳಿಕ ವನ್‌ಡೌನ್ ಆಗಿ ಶ್ರೇಯಸ್ ಅಯ್ಯರ್ ಕಣಕ್ಕಿಳಿದರು. ಕೂಲಿಂಗ್ ಗ್ಲಾಸ್ ಧರಿಸಿ ಸ್ಟೈಲಿಶ್ ಆಗಿ ಕ್ರೀಸ್‌ಗಿಳಿದ ಶ್ರೇಯಸ್ 7 ಎಸೆತ ಎದುರಿಸಿ ಡಕೌಟ್ ಆದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಸನ್‌ಗ್ಲಾಸ್‌ನಲ್ಲಿ ಬ್ಯಾಟಿಂಗ್ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜತೆಗೆ ಟ್ರೋಲ್‌ಗೆ ಗುರಿಯಾಗಿದ್ದಾರೆ.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…