ಮತ್ತೆ ಕುಸಿದ ಮನೆಯ ಗೋಡೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿನ ವಿದ್ಯಾಗಿರಿಯಲ್ಲಿ ವಾಣಿಜ್ಯ ಮಳಿಗೆ ನಿರ್ವಣಕ್ಕೆ ಅಡಿಪಾಯ ಹಾಕಲು ನೆಲ ಅಗೆಯುವ ಸಂದರ್ಭದಲ್ಲಿ ಪಕ್ಕದ ಮನೆ ಪಾಯ ಇತ್ತೀಚೆಗೆ ಕುಸಿತಗೊಂಡಿತ್ತು. ಈಗ ಮತ್ತೆ ಅದೇ ಸ್ಥಳದಲ್ಲಿ ಮತ್ತೊಂದು ಭಾಗದ ಪಾಯದ ಗೋಡೆ ಭಾನುವಾರ ಬೆಳಗ್ಗೆ ಕುಸಿದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಧಾರವಾಡದ ಗಂಗಾ ಪಾಸಲಕರ ಮತ್ತು ಇತರರ ಮಾಲೀಕತ್ವದಲ್ಲಿ ವಿದ್ಯಾಗಿರಿಯಲ್ಲಿ ಅನಧಿಕೃತ ಕಟ್ಟಡ ನಿರ್ವಿುಸಲು ನೆಲ ಅಗೆಯುವ ಸಂದರ್ಭದಲ್ಲಿ ಪಕ್ಕದಲ್ಲಿನ ಶ್ರೀಕಾಂತ ದೇವಗಿರಿ ಎಂಬುವರ ಮನೆಗಳ ಪಾಯಕ್ಕೆ ಧಕ್ಕೆಯಾಗಿ ಮೇ 4ರಂದು ಕಾಂಪೌಂಡ್ ಗೋಡೆ ಕುಸಿತಗೊಂಡಿತ್ತು. ಈ ಬಗ್ಗೆ ಎಚ್ಚೆತ್ತು ಸ್ಥಳಕ್ಕೆ ಭೇಟಿ ನೀಡಿದ್ದ ಪಾಲಿಕೆ ಅಧಿಕಾರಿಗಳು ಸಂಭವನೀಯ ಕಟ್ಟಡ ದುರಂತ ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮಾಲೀಕರಿಗೆ ಸೂಚಿಸಿ ನೋಟಿಸ್ ನೀಡಿದ್ದರು. ಜೊತೆಗೆ ಪಕ್ಕದ ಮನೆಗಳಲ್ಲಿ ವಾಸವಿದ್ದ ಜನರನ್ನು ಸ್ಥಳಾಂತರಿಸಲಾಗಿತ್ತು.

ಪಾಲಿಕೆ ಸೂಚನೆಯಂತೆ ಕಟ್ಟಡ ನಿರ್ವಣದ ಕಾಮಗಾರಿ ನಿಲ್ಲಿಸಿ, ಕುಸಿತಗೊಂಡ ಕಾಂಪೌಂಡ್ ಸ್ಥಳದಲ್ಲಿ ಇತ್ತೀಚೆಗೆ ಹೊಸ ಗೋಡೆ ನಿರ್ವಿುಸಲಾಗುತ್ತಿದೆ. ಆದರೆ, ಮತ್ತೆ ಅದರ ಪಕ್ಕದಲ್ಲಿನ ಗೋಡೆ ಕುಸಿತಗೊಂಡಿದ್ದು, ಸುತ್ತಲಿನ ನಿವಾಸಿಗಳಿಗೆ ಆತಂಕ ಎದುರಾಗಿದೆ. ಭಾನುವಾರ ಬೆಳಗ್ಗೆ ಪಾಯ ಕುಸಿದ ಮಾಹಿತಿ ತಿಳಿದು ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸುರಕ್ಷಾ ಕ್ರಮಗಳನ್ನು ಬಳಸಿಕೊಂಡು ಕುಸಿದ ಪಾಯ ಪುನರ್​ನಿರ್ವಿುಸುವಂತೆ ಮಾಲೀಕರಿಗೆ ಸೂಚಿಸಿದ್ದಾರೆ.

ಕಟ್ಟಡವನ್ನು ನಿಯಮಾನುಸಾರ ನಿರ್ವಿುಸುತ್ತಿದ್ದೇವೆ. ಈ ಹಿಂದೆ ಕಾಂಪೌಂಡ್ ಕುಸಿದಾಗ ಅಲ್ಲಿಯೇ ಹೊಸ ಗೋಡೆ ನಿರ್ವಿುಸಲಾಗಿದೆ. ಉಳಿದ ಭಾಗವನ್ನು ನಿರ್ವಿುಸಲಾಗುತ್ತಿದೆ. ಶ್ರೀಕಾಂತ ಅವರ ಮನೆಯ ಕೆಳಗಡೆಯಿಂದ ನೀರು ಬರುತ್ತಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇತ್ತೀಚೆಗೆ ನೀರು ಬರುವುದು ಹೆಚ್ಚಾಗಿದ್ದರಿಂದ ಮತ್ತೊಂದು ಭಾಗದಲ್ಲಿ ಗೋಡೆ ಕುಸಿತಗೊಂಡಿದೆ. ಅದನ್ನು ಸುರಕ್ಷಾ ಕ್ರಮಗಳ ಮೂಲಕ ಕಟ್ಟುತ್ತೇವೆ ಎಂದು ಕಟ್ಟಡ ಮಾಲೀಕ ಪಾಸಲಕರ ಹೇಳಿದ್ದಾರೆ.

Leave a Reply

Your email address will not be published. Required fields are marked *