ಎರಡು ದಶಕಗಳ ಬಳಿಕ ಸಾಲಿಗ್ರಾಮ ಗ್ರಾಪಂ ‘ಕೈ‘ ತೆಕ್ಕೆಗೆ

blank

ಸಾಲಿಗ್ರಾಮ: ಸಾಲಿಗ್ರಾಮ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸುವರ್ಣಾ ಆಯ್ಕೆಯಾದರು,

ಸಾಲಿಗ್ರಾಮ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 30 ಪಂಚಾಯಿತಿ ಸದಸ್ಯರಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಫಾತಿಮಾ ಉನ್ನಿಸಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುವರ್ಣಾ, ಶಶಿಕಲಾ, ಹೇಮಂತ್‌ಕುಮಾರ್, ನೀಲಮ್ಮ, ಪ್ರಕಾಶ್, ಅಸ್ಮತ್ ಉನ್ನಿಸಾ, ರತ್ನಮ್ಮ, ಶ್ವೇತಾ, ಮಂಜುನಾಥ್, ಕಿರಣ್, ಮರಿಗೌಡ, ಸವಿತಾ, ನಾಗಮಣಿ, ಗೀತಾ, ಶೋಭಾ, ದೇವಿಕಾ, ಲೋಕೇಶ್, ಮಂಜುಳಾ ಅಶೋಕ್ ಫಾತಿಮಾ ಉನ್ನಿಸಾ, ಶಕೀಲ್, ಎಚ್.ಎಸ್.ಸುಧಾ, ಗಂಗಾಧರ್, ಲಕ್ಷ್ಮೀ, ಶೈಲಜಾ, ಬಲರಾಮ್, ಅನಂತ್, ರಾಣಿ, ಹರೀಶ್ ಸೇರಿ ಒಟ್ಟು 30 ಜನ ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಸ್ಮತ್ ಉನ್ನಿಸಾ, ಕಾಂಗ್ರೆಸ್ ಬೆಂಬಲಿತ ಸುವರ್ಣಾ ನಾಮಪತ್ರ ಸಲ್ಲಿಸಿದರು. ಬಹಳ ಕುತೂಹಲ ಕೆರಳಿಸಿದ ಈ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಸ್ಮತ್ ಉನ್ನಿಸಾ 14 ಮತಗಳನ್ನು ಪಡೆದು ಪರಾಭಾವಗೊಂಡರೆ, ಕಾಂಗ್ರೆಸ್ ಬೆಂಬಲಿತ ಪ್ರತಿಸ್ಪರ್ಧಿ ಸುವರ್ಣಾ 15 ಮತಗಳನ್ನು ಪಡೆದು ಜಯಶೀಲರಾದರು. ಒಂದು ಮತ ಕುಲಗೆಟ್ಟಿರುವುದಾಗಿ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೃಷಿ ಇಲಾಖೆ ಮಲ್ಲಿಕಾರ್ಜುನ್ ಘೋಷಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್ ಮಾತನಾಡಿ, 20 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ ಸಾಲಿಗ್ರಾಮ ಗ್ರಾಮ ಪಂಚಾಯಿತಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಹಾಗಾಗಿ ನೂತನ ಅಧ್ಯಕ್ಷರು ಸರ್ಕಾರದ ಸೌಲಭ್ಯಗಳನ್ನು ಗ್ರಾಮ ಪಂಚಾಯಿತಿಯಲ್ಲಿ ಪೂರ್ಣ ಬಳಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದರು.

ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್ ಮಾತನಾಡಿ ತಾಲೂಕಿನಲ್ಲಿ ದೊಡ್ಡ ಗ್ರಾಮ ಪಂಚಾಯಿತಿ ಆಗಿರುವ ಸಾಲಿಗ್ರಾಮದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ಸಾಕಷ್ಟು ವರ್ಷದಿಂದ ಪ್ರಯತ್ನ ಮಾಡುತ್ತಿದ್ದೆವು. ಆದರೆ ಆಗಿರಲಿಲ್ಲ. ಈ ಬಾರಿ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದಿಂದ ನಮ್ಮ ಪಕ್ಷದ ಕಾಂಗ್ರೆಸ್ ಬೆಂಬಲಿತ ಸುವರ್ಣಾ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಪಡೆದುಕೊಂಡಿದ್ದೇವೆ ಎಂದರು.

ನೂತನ ಅಧ್ಯಕ್ಷೆ ಸುವರ್ಣಾ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯ ಹೇಮಂತ್‌ಕುಮಾರ್, ಎಸ್ಸಿ ಘಟಕದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಿಕುಮಾರ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಗ್ರಾಪಂ ಮಾಜಿ ಉಪಾಧ್ಯಕ್ಷ ಡಿ.ದೇವರಾಜು, ಸಿಡಿಸಿ ಸದಸ್ಯ ಸಂತೋಷ್, ಪರೀಕ್ಷಿತ್, ಮಂಜು, ಮೈಕಲ್, ಮಾದೇವನಾಯಕ ನಾಗರಾಜು, ಗುಣಪಾಲ್ ಜೈನ್, ಗಿರೀಶ್ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಶೌಕತ್, ರಕ್ಷಾ ತಮಟಿ ಸದಸ್ಯ ವಾಸಿಮ್, ಅರುಣ್, ಬಿಳಿಯಪ್ಪ ಸೇರಿದಂತೆ ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.

 

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…