PHOTOS & VIDEOS| ಕೇದಾರನಾಥ್​ ದೇವಸ್ಥಾನ ಬಳಿಯಿರುವ ಪವಿತ್ರ ಗುಹೆಯಲ್ಲಿ ಧ್ಯಾನಸ್ಥರಾದ ಪ್ರಧಾನಿ ಮೋದಿ

ನವದೆಹಲಿ: ಲೋಕಸಭಾ ಚುನಾವಣೆಗೆ ನಾಳೆ ಅಂತಿಮ ಹಂತದ ಮತದಾನ ನಡೆಯಲಿದ್ದು, ಚುನಾವಣಾ ಬಹಿರಂಗ ಪ್ರಚಾರಕ್ಕೆ ನಿನ್ನೆ(ಶುಕ್ರವಾರ) ತೆರೆಬಿದ್ದಿದೆ. ಪ್ರಚಾರದಲ್ಲಿ ಬಿಡುವಿಲ್ಲದೇ ಶ್ರಮಿಸಿ, ಮತ್ತೊಮ್ಮೆ ಕೇಂದ್ರದ ಗದ್ದುಗೆ ಏರಲು ಚುನಾವಣಾ ಫಲಿತಾಂಶವನ್ನು ಎದುರು ನೋಡುತ್ತಿರುವ ಪ್ರಧಾನಿ ಮೋದಿ ಅವರು ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕೇದರಾನಾಥ್​ಗೆ ಭೇಟಿ ನೀಡಿರುವ ಅವರು ಧ್ಯಾನದ ಮೊರೆ ಹೋಗಿದ್ದಾರೆ.

ಇಂದಿನಿಂದ ಎರಡು ದಿನಗಳ ಉತ್ತರಖಾಂಡ ಪ್ರವಾಸದಲ್ಲಿರುವ ಮೋದಿ,ಇಂದು(ಶನಿವಾರ) ಮುಂಜಾನೆ ಡೆಹರಾಡೂನ್​ನ ಜಾಲಿಗ್ರಾಂಟ್​ ಏರ್​ಪೋರ್ಟ್​ಗೆ ತಲುಪಿ ಅಲ್ಲಿಂದ ನೇರವಾಗಿ ಕೇದಾರನಾಥ್​ಕ್ಕೆ ತೆರಳಿದರು.

ಬೆಳಗಿನ ಪೂಜಾ ಕಾರ್ಯದಲ್ಲಿ ಪಾಲ್ಗೊಂಡ ಬಳಿಕ ದೇವರಿಗೆ ಪಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ ಅವರು ಬಳಿಕ ಕೇದಾರನಾಥ್​ ಪ್ರದೇಶದ ಅಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸಿದರು. ಬಳಿಕ ಕೇದಾರನಾಥ್​ ದೇವಸ್ಥಾನದ ಬಳಿಯಿರುವ ಪವಿತ್ರ ಗುಹೆಯಲ್ಲಿ ಕೆಲಕಾಲ ಧ್ಯಾನಸ್ಥರಾದರು.

ಉತ್ತರಾಖಂಡದ ಬಿಜೆಪಿ ಅಧ್ಯಕ್ಷ ಅಜಯ್​ ಭಟ್​ ಮಾತನಾಡಿ, ಇದೊಂದು ಧಾರ್ಮಿಕ ಭೇಟಿಯಷ್ಟೇ, ಪ್ರಧಾನಿ ಭೇಟಿಯಿಂದ ಇಲ್ಲಿನ ಜನರು ತುಂಬಾ ಹರ್ಷಗೊಂಡಿದ್ದಾರೆ ಎಂದು ತಿಳಿಸಿದರು.

ನಾಳೆ ಮಧ್ಯಾಹ್ನ ದೆಹಲಿಗೆ ಹಿಂದಿರುಗುವ ಮುನ್ನ ಪ್ರಧಾನಿ ಮೋದಿ ಅವರು ಬೆಳಗ್ಗೆ ಬದರೀನಾಥ್​ಗೆ ಭೇಟಿ ನೀಡಲಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *