ಬಿಡದ ಬ್ಲಾಕ್​ ಫಂಗಸ್: ಚರ್ಮದ ನಂತರ ಕೆಳದವಡೆಯಲ್ಲೂ ಫಂಗಸ್​ ಪತ್ತೆ!

blank

ಚಿತ್ರದುರ್ಗ: ನಗರದ ಖಾಸಗಿ ಆಸ್ಪತ್ರೆ ರೋಗಿಯೊಬ್ಬರಲ್ಲಿ ಚರ್ಮದ ಬ್ಲಾಕ್ ಫಂಗಸ್ ಕಾಣಿಸಿದ್ದ ಪ್ರಕರಣದ ಬೆನ್ನಲ್ಲೇ, ಚಿತ್ರದುರ್ಗದಲ್ಲಿ ರೋಗಿಯೊಬ್ಬರ ಕೆಳದವಡೆಯಲ್ಲಿ ಬ್ಲಾಕ್ ಫಂಗಸ್ ಇರುವುದನ್ನು ನಗರದ ಎಸ್‌ಜೆಎಂ ದಂತ ಮಹಾವಿದ್ಯಾಲಯದ ವೈದ್ಯರು ಪತ್ತೆ ಮಾಡಿದ್ದಾರೆ.

blank

ಸಾಮಾನ್ಯವಾಗಿ ಈ ಬ್ಲಾಕ್ ಫಂಗಸ್ ಮೇಲಿನ ದವಡೆಯಲ್ಲಿ ಕಾಣಿಸುತ್ತದೆ ಹಾಗೂ ಶೇ.3 ರೋಗಿಗಳಲ್ಲಿ ಮಾತ್ರ ಕೆಳದವಡೆಯಲ್ಲಿ ಈ ರೋಗ ಕಂಡು ಬರುತ್ತದೆ. ಹಲ್ಲು ನೋವಿನಿಂದ ಬಳಲುತ್ತಿದ್ದ ರೋಗಿಯನ್ನು ತಪಾಸಣೆ ಮಾಡಿದ ಮಹಾವಿದ್ಯಾಲಯದ ಮುಖ ದವಡೆ ಮತ್ತು ಬಾಯಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ನಾಗರಾಜಪ್ಪ, ಡಾ.ತನ್ವೀರ್ ಅಹಮದ್ ಹಾಗೂ ಡಾ.ಮಧುಮತಿ ಪಾಟೀಲ್ ಅವರಿಗೆ, ರೋಗಿಯ ಕೆಳದವಡೆಯಲ್ಲಿ ಬ್ಲಾಕ್ ಫಂಗಸ್ ಇರುವುದು ಗೊತ್ತಾಗಿದೆ.

ಈ ಪ್ರಕರಣ ಚಿತ್ರದುರ್ಗದಲ್ಲಿ ಮೊದಲನೆಯದಾಗಿದ್ದು, ರೋಗಿಗೆ ವೈದ್ಯರ ತಂಡ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಗೌರಮ್ಮ ತಿಳಿಸಿದ್ದಾರೆ. ಕೋವಿಡ್ ನಂತರದಲ್ಲಿ ಕರ್ನಾಟಕದಲ್ಲಿ ಕೆಳದವಡೆಯಲ್ಲಿ ಈ ರೋಗದ ಒಂದೆರಡು ಪ್ರಕರಣಗಳು ಪತ್ತೆಯಾಗಿವೆ. ಆದರೆ ಚಿತ್ರದುರ್ಗದಲ್ಲಿ ಇದೆ ಮೊದಲನೆಯದೆಂದು ವೈದ್ಯರ ತಂಡದಲ್ಲಿದ್ದ ಡಾ.ಮಧುಮತಿ ಪಾಟೀಲ್ ತಿಳಿಸಿದ್ದಾರೆ.

ನಗರದ ಕರ್ನಾಟಕ ಕಿವಿ, ಮೂಗು ಹಾಗೂ ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರಲ್ಲಿ ಕಳೆದ ಜೂ.1ರಂದು ಚರ್ಮದ ಬ್ಲಾಕ್ ಫಂಗಸ್ ರೋಗ ಇರುವುದನ್ನು ಅಲ್ಲಿಯ ವೈದ್ಯರು ಪತ್ತೆ ಹಚ್ಚಿದ್ದು, ಆ ಪ್ರಕರಣ ದೇಶದಲ್ಲೇ ಮೊದಲೆನ್ನಲಾಗಿತ್ತು.

ಟ್ರಕ್​ ಓಡಿಸುತ್ತಲೇ ಓರಲ್ ಸೆಕ್ಸ್! ಮುಂದಾಗಿದ್ದು ಏನೆಂದು ಕೇಳಿದರೆ ಶಾಕ್ ಆಗ್ತೀರ!

ಗಂಡನೊಂದಿಗೆ ಫೋನ್​ನಲ್ಲಿ ಮಾತನಾಡುತ್ತಾ ಹೊರಹೋದವಳು ದೂರದ ರೈಲ್ವೆ ಹಳಿ ಬಳಿ ಮಾಂಸವಾಗಿ ಪತ್ತೆ!

ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

Share This Article
blank

ರಾತ್ರಿ 9 ಗಂಟೆಯ ನಂತರ ಊಟ ಮಾಡ್ತೀರಾ? ಹಾಗಾದ್ರೆ ಈ ಎಲ್ಲಾ ಆರೋಗ್ಯ ಸಮಸ್ಯೆ ಬರಬಹುದು ಎಚ್ಚರ! Health

Health: ನಮ್ಮ ಆಧುನಿಕ ಜೀವನಶೈಲಿಯಲ್ಲಿ, ತಡರಾತ್ರಿ ಕೆಲಸ ಮಾಡುವುದು, ಹೆಚ್ಚು ಮೊಬೈಲ್​ ಬಳಕೆ ಮಾಡುವುದು, ತಡವಾಗಿ…

ಕನಸಿನಲ್ಲಿ ಜೋರಾಗಿ ಮಳೆ ಬಂದರೆ ಆ ಕನಸಿನ ಅರ್ಥವೇನು? swapna shastra

swapna shastra :  ಕನಸುಗಳು ಹಗಲು ಅಥವಾ ರಾತ್ರಿ ನಿದ್ರೆಯ ಸಮಯದಲ್ಲಿ ಬರುತ್ತವೆ. ನಿದ್ರೆಯಲ್ಲಿ ಕನಸು…

blank