ಒಟ್ಟು 5 ಹಂತಗಳ ಮತದಾನದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ: 7 ಹಂತಗಳ ಬಳಿಕ 160 ಸೀಟು ಸಿಗಲ್ಲ ಎಂದ ದಿನೇಶ್​ ಗುಂಡೂರಾವ್​

ಹುಬ್ಬಳ್ಳಿ: ಲೋಕಸಭೆ ಚುನಾವಣೆಯ ಮೊದಲ 5 ಹಂತಗಳ ಮತದಾನದ ಬಳಿಕ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿರುವ ಮಾಹಿತಿ ಇದೆ. ಆದರೆ, ಸಮೀಕ್ಷಾ ವರದಿಗಳನ್ನು ಬಹಿರಂಗಪಡಿಸಿಲ್ಲ ಅಷ್ಟೇ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 7 ಹಂತಗಳ ಮತದಾನ ಮುಗಿದ ಬಳಿಕ ಬಿಜೆಪಿಯ 160 ಸೀಟುಗಳನ್ನು ದಾಟುವುದಿಲ್ಲ. ಇದು ಬಿಜೆಪಿ ಮುಖಂಡರನ್ನು ಕಂಗೆಡೆಸಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿಯ ಎಲ್ಲ ಮುಖಂಡರು ಹತಾಶೆಯಿಂದ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಸರ್ಕಾರ ರಚಿಸಿ ತೋರಿಸಲಿ
ತಮ್ಮ ಬಳಿ ಆಡಳಿತಾರೂಢ ಮೈತ್ರಿಕೂಟದ ಅಷ್ಟು ಶಾಸಕರು, ಇಷ್ಟು ಶಾಸಕರು ಇದ್ದಾರೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಾರೆ. ದೀಪಾವಳಿಯೂ ಮುಗಿಯಿತು, ಸಂಕ್ರಾಂತಿಯೂ ಆಯಿತು. ಅಷ್ಟೊಂದು ಬೆಂಬಲ ಇದ್ದರೆ ಬಿಜೆಪಿಯವರು ಸರ್ಕಾರ ರಚಿಸಿ ತೋರಿಸಲಿ ಎಂದು ದಿನೇಶ್​ ಗುಂಡೂರಾವ್​ ಸವಾಲು ಹಾಕಿದರು.

One Reply to “ಒಟ್ಟು 5 ಹಂತಗಳ ಮತದಾನದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ: 7 ಹಂತಗಳ ಬಳಿಕ 160 ಸೀಟು ಸಿಗಲ್ಲ ಎಂದ ದಿನೇಶ್​ ಗುಂಡೂರಾವ್​”

  1. Dinesh Gundu Rao is the biggest buffer of Karnataka politics. Having inherited the genes of a corrupt politician , it is no surprise that he is behaving like illiterate and servile mentality politician, just trying to save his power and seat

Leave a Reply

Your email address will not be published. Required fields are marked *