ಅಫಜಲಪುರ: ತಾಲೂಕಿನ ಚೌಡಾಪುರದಲ್ಲಿ ನಡೆದ ಭೀಕರ ಕೊಲೆಯ ಘಟನೆ ಮರೆಮಾಚುವ ಮುನ್ನವೇ ತಾಲೂಕಿನ ಸೀಧನೂರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮತ್ತೊಂದು ಕೊಲೆ ನಡೆದಿದೆ.
ಸೀಧನೂರ ಗ್ರಾಮದ ಬಲಭೀಮ ಸಗರ (23) ಕೊಲೆಗೀಡಾದವ. ಕೆಲ ದಿನಗಳ ಹಿಂದೆ ಜೈಲಿನಿಂದ ಬೇಲ್ ಮೇಲೆ ಬಿಡುಗಡೆ ಆಗಿ, ಕಲಬುರಗಿ ನಗರದಲ್ಲಿ ವಾಸವಾಗಿದ್ದ.
ದಸರಾ ಹಬ್ಬದ ನಿಮಿತ್ತ ಗ್ರಾಮಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ರುಂಡ ಚಂಡಾಡಿ ಕೊಲೆ ಮಾಡಲಾಗಿದೆ. ಹಳೇ ವೈಷ್ಯಮ್ಯ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ರೇವೂರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.