More

  ಇಂದು ಆಸೀಸ್-ಆಫ್ಘನ್ ಕಾದಾಟ: ಆಸ್ಟ್ರೇಲಿಯಾ ಗೆದ್ದರೆ ಸೆಮೀಸ್ ಪ್ರವೇಶ ಖಚಿತ

  ಸೇಂಟ್ ವಿನ್ಸೆಂಟ್: ಸತತ ಐದು ಪಂದ್ಯ ಗೆದ್ದು ಬೀಗುತ್ತಿರುವ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್‌ನ ಸೂಪರ್-8 ಹಂತದ ತನ್ನ 2ನೇ ಪಂದ್ಯದಲ್ಲಿ ಭಾನುವಾರ ಅಫ್ಘಾನಿಸ್ತಾನದ ಸವಾಲು ಎದುರಿಸಲಿದೆ. ಮಿಚೆಲ್ ಮಾರ್ಷ್ ಪಡೆ ಗೆಲುವು ಸಾಧಿಸಿದರೆ ಆಸೀಸ್ ಜತೆಗೆ ಟೀಮ್ ಇಂಡಿಯಾದ (ಬಾಂಗ್ಲಾ ಎದುರು ಗೆದ್ದಿದ್ದರೆ) ಸೆಮಿಫೈನಲ್ ಸ್ಥಾನವೂ ಖಾತ್ರಿಯಾಗಲಿದೆ.

  ಟೂರ್ನಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿರುವ ಆಸ್ಟ್ರೇಲಿಯಾ ರನ್‌ರೇಟ್ ಲೆಕ್ಕಾಚಾರದ ಪ್ರಕಾರ ಗ್ರೂಪ್-1ರಲ್ಲಿ ಮೇಲುಗೈ ಸಾಧಿಸಿದೆ. ಸರ್ವಾಂಗೀಣ ನಿರ್ವಹಣೆಯೊಂದಿಗೆ ಹಿಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ಗೆಲುವಿನ ೇವರಿಟ್ ಎನಿಸಿದೆ. ಆದರೆ ಟೂರ್ನಿಯ ಕಪ್ಪುಗುದುರೆ ಎನಿಸಿರುವ ಅ್ಘಾನಿಸ್ತಾನ ಲೀಗ್ ಹಂತದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ್ದು, 2023ರ ಏಕದಿನ ವಿಶ್ವಕಪ್‌ನಲ್ಲೂ ಆಸೀಸ್ ಎದುರು ಉತ್ತಮ ಪ್ರದರ್ಶನ ನೀಡಿದೆ. ಆದರೆ ಭಾರತ ಎದುರು 47 ರನ್‌ಗಳ ಸೋಲು ಅನುಭವಿಸಿರುವ ಆ್ಘನ್ (- 2.350) ಗೆಲುವಿನ ಜತೆಗೆ ರನ್‌ರೇಟ್‌ನಲ್ಲೂ ಭಾರಿ ಸುಧಾರಣೆ ಕಾಣುವ ಅವಶ್ಯಕತೆ ಇದೆ. ಆಸೀಸ್ ಎದುರು ಸೋತರೆ ಕೊನೇ ಪಂದ್ಯಕ್ಕೂ ಮುನ್ನವೇ ಸೆಮೀಸ್ ಆಸೆ ಕೈಬಿಡಲಿದೆ.

  ಕೊನೇ ಟಿ20 ವಿಶ್ವಕಪ್ ಆಡುತ್ತಿರುವ ಡೇವಿಡ್ ವಾರ್ನರ್ ಎರಡು ಅರ್ಧಶತಕ ಸಿಡಿಸಿ ಉತ್ತಮ ಲಯದಲ್ಲಿದ್ದಾರೆ. ಟ್ರಾವಿಸ್ ಹೆಡ್, ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಬಲ ತುಂಬಲಿದ್ದಾರೆ. ಆಡಂ ಜಂಪಾ (11) ಆಸೀಸ್ ಬೌಲಿಂಗ್ ಪ್ರಮುಖ ಅಸ ಎನಿಸಿದ್ದಾರೆ. ಪ್ಯಾಟ್ ಕಮ್ಮಿನ್ಸ್ ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್‌ಗಳಿಸಿ ಲಯಕ್ಕೆ ಮರಳಿದ್ದಾರೆ.
  ಅಮೆರಿಕ ಪಿಚ್‌ನಲ್ಲಿ ಆ್ಘನ್‌ನ ಜಲ್ಲಾಕ್ ಾರೂಖಿ (15 ವಿಕೆಟ್) ಹಾಗೂ ನಾಯಕ ರಶೀದ್ ಖಾನ್ (9)ಬ್ಯಾಟರ್‌ಗಳಿಗೆ ಕಡಿವಾಣ ಹೇರಿದರು. ರಹಮಾನುಲ್ಲಾ ಗುರ್ಬ (165 ರನ್), ಇಬ್ರಾಹಿಂ ಜದ್ರಾನ್ (160) ಾರ್ಮ್ ಆ್ಘನ್ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಮಧ್ಯಮ ಕ್ರಮಾಂಕ ಬ್ಯಾಟರ್‌ಗಳಿಂದ ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನಿರೀಕ್ಷೆ ಇದೆ.

  See also  ವಿಶ್ವ ದಾಖಲೆಗಾಗಿ ಅನವರತ-24 ತರಬೇತಿ

  ಮುಖಾಮುಖಿ: 1
  ಆಸ್ಟ್ರೇಲಿಯಾ: 1
  ಆ್ಘನ್: 0
  ಆರಂಭ: ಬೆಳಗ್ಗೆ 6

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts