ಅಫ್ಘಾನಿಸ್ತಾನ: ತಾಲಿಬಾನ್​ ದಾಳಿಯಿಂದ 100 ಸಾವು, 133ಕ್ಕೂ ಹೆಚ್ಚು ಜನರಿಗೆ ಗಾಯ

ಘಜ್ನಿ: ಅಫ್ಘಾನಿಸ್ತಾನದ ಘಜ್ನಿ ನಗರದಲ್ಲಿ ತಾಲಿಬಾನ್​ ನಡೆಸಿರುವ ದಾಳಿಯಲ್ಲಿ 100 ಮಂದಿ ಮೃತಪಟ್ಟಿದ್ದು, 133ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ.

ಮೃತರಲ್ಲಿ 90 ಜನರು ಸೈನಿಕರು ಅಥವಾ ಕಾನೂನು ಜಾರಿ ಸಿಬ್ಬಂದಿಯಾಗಿದ್ದು, 13 ಮೃತರನ್ನು ಸಾರ್ವಜನಿಕರು ಎಂದು ಗುರುತಿಸಲಾಗಿದೆ.

ಉಗ್ರರು ಚುನಾವಣಾ ಆಯೋಗದ ಕಚೇರಿಯನ್ನು ಸುಟ್ಟುಹಾಕಿದ್ದು, ಹಾಗೆಯೇ ಕಾಬೂಲ್-ಕಂದಾಹಾರ್ ಹೆದ್ದಾರಿಯನ್ನು ಅಡ್ಡಗಟ್ಟಿದೆ ಎಂದು ವರದಿಯಾಗಿದೆ.

ಉಗ್ರರ ವಿರುದ್ಧ ಹೋರಾಟಕ್ಕೆ ವಿದೇಶಿ ಸೇನಾಪಡೆಗಳು ವಾಯು ಬೆಂಬಲದೊಂದಿಗೆ ಸಹಾಯವನ್ನು ವಿಸ್ತರಿಸಿದೆ. (ಏಜೆನ್ಸೀಸ್​)