ನೀನು ಬೌಲಿಂಗ್​ ಮಾಡ್ತೀಯಾ, ಇಲ್ಲಾ ಬೌಲರ್​ ಚೇಂಜ್​ ಮಾಡಲಾ?..ಕೂಲ್ ಕ್ಯಾಪ್ಟನ್​ ಸಿಡಿಮಿಡಿ

ದುಬೈ: ಮಹೇಂದ್ರ ಸಿಂಗ್​ ಧೋನಿ ಕೂಲ್​ ಕ್ಯಾಪ್ಟನ್​ ಎಂದೇ ಹೆಸರಾಗಿದ್ದವರು. ಎಂಥದ್ದೇ ಸಮಯವಿರಲಿ ತಾಳ್ಮೆಯಿಂದ ಇರುತ್ತಾರೆ. ಎಲ್ಲರೊಂದಿಗೂ ಹೊಂದಾಣಿಕೆಯ ಸ್ವಭಾವ ಅವರದ್ದು. ಅವರ ಈ ತಾಳ್ಮೆಯ ಗುಣದಿಂದಲೇ ಭಾರತಕ್ಕೆ ಹಲವು ಬಾರಿ ಒಳ್ಳೆಯದಾಗಿದೆ.

ಆದರೆ, ಮಂಗಳವಾರ ದುಬೈನಲ್ಲಿ ನಡೆದ ಭಾರತ ಮತ್ತು ಅಫ್ಘಾನಿಸ್ತಾನ ಪಂದ್ಯದ ವೇಳೆಗೆ ಮತ್ತೆ ನಾಯಕತ್ವ ವಹಿಸಿಕೊಂಡಿದ್ದ ಧೋನಿ, ಸ್ಪಿನ್ನರ್ ಬೌಲರ್​ ಕುಲದೀಪ ಯಾದವ್​ ವಿರುದ್ಧ ತುಂಬ ಸಿಟ್ಟಾಗಿದ್ದರು.

ಕುಲದೀಪ್​ ಯಾದವ್​ ಬೌಲಿಂಗ್​ ಮಾಡುವ ಮೊದಲು ಫೀಲ್ಡಿಂಗ್ ವ್ಯವಸ್ಥೆ ಬದಲಿಸುವಂತೆ ಧೋನಿಗೆ ತಿಳಿಸಿದರು. ಆದರೆ, 2011ರಲ್ಲಿ ವಿಶ್ವಕಪ್​ ಗೆದ್ದುಕೊಟ್ಟ ನಾಯಕ ಧೋನಿ ಅದಕ್ಕೆ ಒಪ್ಪಲಿಲ್ಲ. ಬದಲಿಗೆ ಕುಲದೀಪ್​ ಯಾದವ್​ ಮೇಲೆ ರೇಗಿದರು. ನೀನು ಬೌಲ್​ ಮಾಡುತ್ತೀಯಾ ಅಥವಾ ಬೌಲರ್​ನನ್ನು ಬದಲಿಸಲಾ ಎಂದು ಹೇಳಿದರು. ಇದರಿಂದ ಕುಲದೀಪ್​ ಬೇಸರಗೊಂಡರು.

ಕುಲದೀಪ್​ಗೆ ಧೋನಿ ನೀಡಿದ ಪ್ರತಿಕ್ರಿಯೆ ಸ್ಟಂಪ್​ನಲ್ಲಿ ಅಳವಡಿಸುವ ಮೈಕ್ರೋಫೋನ್​ನಲ್ಲಿ ಸೆರೆಯಾಗಿದೆ.