ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ: ಹುತಾತ್ಮ ಗುರು ಪತ್ನಿ ಕಲಾವತಿ ಸಲ್ಯೂಟ್‌

ಮಂಡ್ಯ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮೂಲಕ ಪ್ರತೀಕಾರದ ಹಿನ್ನೆಲೆಯಲ್ಲಿ ಹುತಾತ್ಮ ಯೋಧ ಗುರು ಪತ್ನಿ ವಿಷಯ ಕೇಳಿ ಎದ್ದು ನಿಂತು ಸಲ್ಯೂಟ್ ಹೊಡೆದಿದ್ದಾರೆ.

ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ್ದ ಗುಡಿಗೆರೆ ಗ್ರಾಮದ ಗುರು ಪತ್ನಿ ಕಲಾವತಿ, ಭಾರತ ಪ್ರತೀಕಾರ ತೀರಿಸಿಕೊಂಡ ವಿಷಯ ಕೇಳಿ ಸ್ವಲ್ಪ ಖುಷಿಯಾಗಿದೆ. ಆದರೆ, ಇಂತಹ ಪ್ರತೀಕಾರದ ದಾಳಿಗಳು ನಿಲ್ಲಬಾರದು, ಪಾಕ್ ಮೇಲೆ ಮತ್ತಷ್ಟು ನಡೆಯುತ್ತಿರಬೇಕು ಎಂದು ಹೇಳಿದ್ದಾರೆ.

ಇಂದು ಹುತಾತ್ಮ ಯೋಧನ 11ನೇ ದಿನದ ಪುಣ್ಯ ತಿಥಿ ಅಂಗವಾಗಿ ಗುಡಿಗೆರೆ ಕಾಲೋನಿಯ ಗುರು ನಿವಾಸದಲ್ಲಿ ಸಿದ್ಧತೆ ಕೈಗೊಳ್ಳಲಾಗಿತ್ತು. ತಿಥಿ ಕಾರ್ಯಕ್ಕೆ 5 ಸಾವಿರ ಜನರು ಭಾಗಿ ಸಾಧ್ಯತೆಯಿದ್ದು, ಭಾರತೀಯ ವಾಯುಸೇನೆಯಿಂದ ಜೈಷ್‌ ಇ ಮೊಹಮ್ಮದ್‌ ಉಗ್ರರ ಅಡಗುತಾಣಗಳ ಮೇಲೆ ನಡೆದ ದಾಳಿಯ ಸುದ್ದಿ ತಿಳಿದು ಸೇನೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)