ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ವಿಜಯವಾಣಿ ಸುದ್ದಿಜಾಲ ಕೆ.ಆರ್.ನಗರ
ನಿಗೂಡ ಜ್ವರ ಕಾಣಿಸಿಕೊಂಡಿರುವ ತಾಲೂಕಿನ ಮಲುಗನಹಳ್ಳಿ ಗ್ರಾಮಕ್ಕೆ ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಎಚ್.ಡಿ.ಶರತ್ ಮತ್ತು ತಂಡದವರು ಭೇಟಿನೀಡಿ ಪರಿಶೀಲಿಸಿದರು. ಜ್ವರಕ್ಕೆ ತುತ್ತಾಗಿರುವವರ ರಕ್ತದ ಮಾದರಿ ಪರೀಕ್ಷೆ ಮಾಡಿಸಿದರು.
ಎಚ್.ಡಿ.ಶರತ್ ಮಾತನಾಡಿ, ಗ್ರಾಮದ ಎಲ್ಲರ ಆರೋಗ್ಯ ತಪಾಸಣೆ ಮಾಡಲಾಗಿದ್ದು ಹಳೆಯ 10 ಜ್ವರದ ಪ್ರಕರಣಗಳ ಜತೆಗೆ ಹೊಸದಾಗಿ ಇಬ್ಬರಿಗೆ ಜ್ವರ ಇರುವುದು ಪತ್ತೆಯಾಗಿದ್ದು, ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ. ಜುಲೈ 19 ರಂದು ಗ್ರಾಮದಲ್ಲಿ ಸಾಮೂಹಿಕ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ನುರಿತ ವೈದ್ಯರು ಮತ್ತು ತಜ್ಞರಿಂದ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ತಿಳಿಸಿದ ಅವರು, ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದರು.

Leave a Reply

Your email address will not be published. Required fields are marked *