ಹುಬ್ಬಳ್ಳಿ: ಇಲ್ಲಿಯ ಪೃಥ್ವಿ ಪ್ಯಾರಡೈಸ್‌ನಲ್ಲಿ ಇತ್ತೀಚೆಗೆ ಇಂಪಲ್ಸ್ ಪದವಿಪೂರ್ವ ವಿಜ್ಞಾನ ಕಾಲೇಜ್‌ನ ವಾರ್ಷಿಕೋತ್ಸವ (ಸಂಸ್ಕೃತಿ -2025 ) ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಧಾರವಾಡ ಐಐಟಿ ಡೀನ್ ಡಾ. ಶಿವಪ್ರಸಾದ ಮಾತನಾಡಿ, ತಾಂತ್ರಿಕ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ನ್ಯಾನೋ ಟೆಕ್ನಾಲಜಿ, ಬಯೋ ಟೆಕ್ನಾಲಜಿ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು. ಇವುಗಳ ಕಲಿಕೆಯಿಂದ ಉದ್ಯೋಗಾವಕಾಶ ವಿಫುಲವಾಗಿವೆ ಎಂದರು.
ಪ್ರಮೋದ ರಾಯಚೂರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಜತೆಗೆ ಸಂಸ್ಕಾರ ಕಲಿಯಬೇಕು. ಬದಲಾದ ಪಠ್ಯಕ್ಕೆ ತಕ್ಕಂತೆ ಅಧ್ಯಯನ ಮಾಡಬೇಕು ಎಂದರು.
ಅಕಾಡೆಮಿ ನಿರ್ದೇಶಕ ಎಸ್.ಬಿ. ಹಿರೇಮಠ ಮಾತನಾಡಿದರು. ಶಿವಯೋಗಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಸವರಾಜ ಚಿನಿವಾಲರ, ಆರ್.ಡಿ. ಶೇಖರ, ಡಾ.ಜಿ.ಬಿ. ಕಲಕೋಟಿ, ಎಸ್.ಬಿ. ಹಿರೇಮಠ, ಲಕ್ಷ್ಮೀ ಹಿರೇಮಠ, ಇತರರು ಇದ್ದರು.