ಬಂದ ನೋಡು ಭಲೇ ಹುಡುಗ ; ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸುವ ಸಾಹಸಮಯ ಮಕ್ಕಳ ಚಿತ್ರ


ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಚಿತ್ರದುರ್ಗ ಮೂಲದ ಎಂ. ನಿಂಗರಾಜು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಸಿನಿಮಾ “ಭಲೇ ಹುಡುಗ’. ಈ ಚಿತ್ರದಲ್ಲಿ ಅವರ ಪುತ್ರ ಮಾಸ್ಟರ್​ ಶರತನ್​ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸುವ ಹುಡುಗನ ಸುತ್ತ ಕಥೆ ಸಾಗುತ್ತದೆ. ಅಕ್ಟೋಬರ್​ನಲ್ಲಿ ಚಿತ್ರದ ಶೂಟಿಂಗ್​ ಪ್ರಾರಂಭಿಸಿ ಚಿತ್ರದುರ್ಗ, ಚಂದವಳ್ಳಿ, ನಂದಿ ಗಿರಿಧಾಮದ ಸುತ್ತಮುತ್ತ ಒಂದು ತಿಂಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

ಬಂದ ನೋಡು ಭಲೇ ಹುಡುಗ ; ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸುವ ಸಾಹಸಮಯ ಮಕ್ಕಳ ಚಿತ್ರ
ಬಂದ ನೋಡು ಭಲೇ ಹುಡುಗ ; ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸುವ ಸಾಹಸಮಯ ಮಕ್ಕಳ ಚಿತ್ರ 3

ಕೇವಲ 12 ವರ್ಷದ ಹುಡುಗನೊಬ್ಬ ತನ್ನ ಹಳ್ಳಿಯಲ್ಲಿ ನಡೆಯುತ್ತಿರುವ ಅರಾಜಕತೆಯ ವಿರುದ್ಧ ತಿರುಗಿ ಬೀಳುತ್ತಾನೆ. ಹಳ್ಳಿಯ ಜನರಲ್ಲಿ ಬೇರೂರಿದ್ದ ಮೂಢನಂಬಿಕೆಯ ಬಗ್ಗೆ ಅರಿವು ಮೂಡಿಸುತ್ತಾನೆ. ದುಶ್ಚಗಳಿಗೆ ದಾಸರಾದ ಹಳ್ಳಿಯ ಯುವಕರಲ್ಲಿ ಜಾಗೃತಿ ಮೂಡಿಸಿ, ಹಳ್ಳಿಗಾಗಿ ಹೇಗೆಲ್ಲಾ ಹೋರಾಡಿ, ಎಲ್ಲರಿಂದ ಭಲೇ ಹುಡುಗ ಅಂತನಿಸಿಕೊಳ್ಳುತ್ತಾನೆ. ಇದೊಂದು ಮಕ್ಕಳ ಸಾಹಸಮಯ ಚಿತ್ರವಾಗಿದ್ದು, ಅನಿರುದ್ಧ ಶಾಸ್ತ್ರಿ ಸಂಗೀತ, ಯೋಗರಾಜ್​ ಭಟ್​ ಸಾಹಿತ್ಯ, ಪ್ರಮೋದ್​ ಭಾರತೀಯ ಛಾಯಾಗ್ರಹಣ, ಥ್ರಿಲ್ಲರ್​ ಮಂಜು ಸಾಹಸವಿರಲಿದೆ.

ಬಂದ ನೋಡು ಭಲೇ ಹುಡುಗ ; ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸುವ ಸಾಹಸಮಯ ಮಕ್ಕಳ ಚಿತ್ರ
ಬಂದ ನೋಡು ಭಲೇ ಹುಡುಗ ; ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸುವ ಸಾಹಸಮಯ ಮಕ್ಕಳ ಚಿತ್ರ 4

ಮಾಸ್ಟರ್​ ಶರತ್​ ಜತೆ ಮಾಸ್ಟರ್​ ನಶ್ಯಾಮ್​, ಬೇಬಿ ಜಯಲಲಿತಾ, ಮಾಸ್ಟರ್​ ಅಂಜನ್​, ಬಲರಾಂ, ಸಮಯ್​, ಜ್ಯೋತಿ ಮರೂರ್​, ಡಾ. ಈಶ್ವರ್​ ನಾಗನಾಥ್​ ತಾರಾಗಣದಲ್ಲಿದ್ದಾರೆ.

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…