More

    ಜನಮತ: ಸಣ್ಣ ವ್ಯಾಪಾರಸ್ಥರಿಗೆ ಅನುಕೂಲ

    ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ಭದ್ರತೆ ನೀಡುವ “ಪ್ರಧಾನಿ ಸಂಯಮ ನಿಧಿ’ ಯೋಜನೆಯನ್ನು ಎರಡು ವರ್ಷ ವಿಸ್ತರಣೆ ಮಾಡಿದ್ದು ಸೂಕ್ತವಾಗಿದೆ. ಇದರಿಂದ ದೇಶಾದ್ಯಂತ ಮಹಾನಗರ, ಸಣ್ಣಪುಟ್ಟ ನಗರಗಳಲ್ಲಿ ಬೀದಿಬದಿ ವ್ಯಾಪಾರ ಮಾಡುವ 1.20 ಕೋಟಿ ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಈ ಯೋಜನೆಯನ್ನು 2024 ಡಿಸೆಂಬರ್​ವರೆಗೆ ವಿಸ್ತರಣೆ ಮಾಡಲಾಗಿದೆ. ಬೀದಿಬದಿ ವ್ಯಾಪಾರಸ್ಥರು ಆರ್ಥಿಕ ಮುಗ್ಗಟ್ಟಿನಿಂದ ಬ್ಯಾಂಕ್​ ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಸಾಲಸೌಲಭ್ಯ ಸಿಗದೆ ಪರದಾಡುವ ಪರಿಸ್ಥಿತಿಯಿಂದ ಪಾರು ಮಾಡಲು “ಪ್ರಧಾನಿ ಸ್ವಯಂ ನಿಧಿ’ ಯೋಜನೆಯಡಿ ಯಾವುದೇ ಖಾತ್ರಿ, ಅಡವು ಇಲ್ಲದೆ 10 ಸಾವಿರ ರೂಪಾಯಿವರೆಗೆ ನೇರವಾಗಿ ಸಾಲ ಮಂಜೂರು ಮಾಡಲಾಗುತ್ತದೆ. ಸಕಾಲಕ್ಕೆ ಸಾಲವನ್ನು ಮರುಪಾವತಿ ಮಾಡಿದರೆ, ವಾರ್ಷಿಕವಾಗಿ ಬಡ್ಡಿಯಲ್ಲಿ ಶೇಕಡ 7 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

    ಕೇಂದ್ರ ಸರ್ಕಾರವು ಸದ್ಯ ಬೀದಿಬದಿ ವ್ಯಾಪಾರಸ್ಥರ ಕಲ್ಯಾಣಕ್ಕಾಗಿ 5 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಹೊಂದಿತ್ತು. ಈ ಯೋಜನೆಯನ್ನು ಮತ್ತೆ ಎರಡು ವರ್ಷ ವಿಸ್ತರಣೆ ಮಾಡಿರುವುದರಿಂದ ಈ ಮೊತ್ತವು 8,100 ಕೋಟಿ ರೂ.ಗೆ ಹೆಚ್ಚಳವಾಗಲಿದೆ. ಕಳೆದ ಎರಡು ವರ್ಷದಿಂದ ಕೋವಿಡ್​ ಸಾಂಕ್ರಾಮಿಕ ರೋಗದ ಹಾವಳಿಯಿಂದ ಬೀದಿಬದಿ ವ್ಯಾಪಾರಸ್ಥರ ಆರ್ಥಿಕ ಜೀವನ ತೊಂದರೆಗೆ ಈಡಾಗಿದ್ದು, ಇದನ್ನು ಮನಗಂಡಿರುವ ಕೇಂದ್ರ ಸರ್ಕಾರ “ಪ್ರಧಾನಿ ಸಂಯಮ ನಿಧಿ’ ಯೋಜನೆಯನ್ನು ಎರಡು ವರ್ಷ ವಿಸ್ತರಣೆ ಮಾಡಿರುವುದು ಉತ್ತಮ ನಿರ್ಧಾರವಾಗಿದೆ.

    | ಆರ್​.ಬಿ.ಜಿ ಘಂಟಿ ಅಮೀನಗಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts