ಮುಂದುವರಿದ ಟಾಸ್ಕ್ ವರ್ಕ್ ನೌಕರರ ಪ್ರತಿಭಟನೆ

ಮದ್ದೂರು: ನೀರುಗಂಟಿಗಳಿಗೆ ಇ.ಎಸ್.ಐ. ಮತ್ತು ಫಿ.ಎಫ್. ನೀಡುವ ಜತೆಗೆ ನಾಲ್ಕು ತಿಂಗಳ ಸಂಬಳ ನೀಡುವಂತೆ ಒತ್ತಾಯಿಸಿ ಟಾಸ್ಕ್ ವರ್ಕ್ ದಿನಗೂಲಿ ನೌಕರರ ಸಂಘದ ಪದಾಧಿಕಾರಿಗಳು ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ಮೂರನೇ ದಿನವೂ ಮುಂದುವರಿದಿದೆ.

ಸಂಬಳ ನೀಡದ ಹಾಗೂ ವಿವಿಧ ಬೇಡಿಕೆಗಳನ್ನ ಈಡೇರಿಸದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪದಾಧಿಕಾರಿಗಳು, ಬುಧವಾರ ಬೆಳಗ್ಗೆಯಿಂದ ಪ್ರತಿಭಟನೆ ಮಾಡುತ್ತಿದ್ದರೂ ಈವರೆಗೆ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಬಂದು ನಮ್ಮ ಸಮಸ್ಯೆಗಳನ್ನು ಕೇಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೇಡಿಕೆ ಈಡೇರುವ ತನಕ ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ. ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಂಘದ ಗೌರವ ಅಧ್ಯಕ್ಷ ವಿ.ರವಿ, ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಶಂಕರ್‌ರಾವ್, ಕಾರ್ಯದರ್ಶಿ ಕೆ.ಸುರೇಶ್ ಸಹ ಕಾರ್ಯದರ್ಶಿ ಪುಟ್ಟೇಗೌಡ, ಖಜಾಂಚಿ ಎ.ಬಿ.ಬಸವರಾಜು, ನಿರ್ದೇಶಕರಾದ ಮಾಯಣ್ಣ, ಬಿ.ಎಸ್.ನರಸಿಂಹಯ್ಯ, ರಘು, ಜಗದೀಶ್, ಅಲಮೇಲಮ್ಮ, ನಾಗೇಶ್, ಚನ್ನಮ್ಮ, ವಸಂತಮ್ಮ, ಭಾರತಿ ಇದ್ದರು.

 

Leave a Reply

Your email address will not be published. Required fields are marked *