ಕಂಪ್ಲಿ: ದೇಹಕ್ಕೆ ಆಹಾರದಂತೆ ಯೋಗಾಭ್ಯಾಸವೂ ಮುಖ್ಯ ಎಂದು ಹರಿದ್ವಾರದ ಯೋಗಗುರು ಸ್ವಾಮಿ ದೇವ್‌ಜಿ ಪರಮಾರ್ಥ ಹೇಳಿದರು.
ಇಲ್ಲಿನ ಶಾರದಾ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಹಮ್ಮಿಕೊಂಡಿದ್ದ ಸತ್ಸಂಗ ಮತ್ತು ಕಾರ್ಯಕರ್ತರ ಬೈಠಕ್ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಕಲಬೆರಕೆ ಆಹಾರ ಸೇವನೆ, ಕಲುಷಿತ ಪರಿಸರ, ಒತ್ತಡದ ಜೀವನದಲ್ಲಿ ನಿಯಮಿತ ಯೋಗಾಭ್ಯಾಸವೇ ಆರೋಗ್ಯದ ಗುಟ್ಟಾಗಿದೆ. ಯೋಗಾಭ್ಯಾಸದ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ದಿಸೆಯಲ್ಲಿ ತಾಲೂಕಿನಾದ್ಯಂತ ವಾರ್ಡ್‌ಗೊಂದು ಸ್ಥಳದಲ್ಲಿ ಯೋಗ ತರಬೇತಿ ನಿತ್ಯ ನಡೆಯಬೇಕಿದೆ. ಯೋಗ ಶಿಕ್ಷಕರ ತರಬೇತಿ ಕೇಂದ್ರ ಆಯೋಜನೆಗೊಳ್ಳಬೇಕಿದೆ ಎಂದರು.
ರಾಜ್ಯ ಕಿಶಾನ್ ಪ್ರಭಾರ ಸಂಜಯ್ ಕುಷ್ಟಗಿ, ರಾಜ್ಯ ಮಹಿಳಾ ಪ್ರಭಾರ ಗೌರಮ್ಮ, ರಾಜ್ಯ ಸಮಿತಿ ಸದಸ್ಯ ಬಾಲಚಂದ್ರ ಶರ್ಮಜೀ, ಮಹಿಳಾ ಪ್ರಭಾರ ಕಲ್ಗುಡಿ ರತ್ನಾ ಇತರರಿದ್ದರು.