More

    ರೇವೂರಿನಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ನಾಳೆ

    ದೇವಲಗಾಣಗಾಪುರ: ರೇವೂರ (ಬಿ) ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ಜಾತ್ರೋತ್ಸವ ನಿಮಿತ್ತ ಗುರುವಾರ ನೂತನ ಶಿಖರದ ಸುವರ್ಣ ಕಳಸಾರೋಹಣ ಹಾಗೂ ಮಾಲಗಂಭ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಗ್ರಾಮದ ಪ್ರಮುಖರು ತಿಳಿಸಿದ್ದಾರೆ.

    ಬೆಳಗ್ಗೆ 10ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀಶೈಲ ಜಗದ್ಗುರು ಶ್ರೀ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ರಾಯಚೂರಿನ ಸೋಮವಾರಪೇಟೆ ಹಿರೇಮಠ, ಅತನೂರಿನ ಶ್ರೀ ಅಭಿನವ ರಾಚೋಟಿ ವೀರ ಶಿವಾಚಾರ್ಯರು ನೇತೃತ್ವ ವಹಿಸುವರು. ಮಧ್ಯಾಹ್ನ 1ಕ್ಕೆ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ಜರುಗಲಿದೆ.

    ಬಡದಾಳದ ಶ್ರೀ ಡಾ.ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಅಧ್ಯP್ಷÀತೆ ವಹಿಸುವರು. ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು, ರೇವೂರಿನ ಶ್ರೀ ಶ್ರೀಕಂಠ ಶಿವಾಚಾರ್ಯರು, ಅಫಜಲಪುರದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಹಿರೇನಾಗಾವಿಯ ಶ್ರೀ ಜಯಶಾಂತಲಿAಗ ಸ್ವಾಮೀಜಿ, ಚಿನ್ಮಯಗಿರಿಯ ಶ್ರೀ ವೀರಮಹಾಂತ ಶಿವಾಚಾರ್ಯರು, ಚಿಂಚೋಳಿಯ ಶ್ರೀ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯರು, ಅತನೂರಿನ ಶ್ರೀ ಅಭಿನವ ಗುರುಬಸವ ಶಿವಾಚಾರ್ಯರು, ಮ¯್ಲÁಬಾದ್‌ನ ಶ್ರೀ ರೇವಣಸಿದ್ಧ ಶಿವಾಚಾರ್ಯರು, ದುಧನಿಯ ಶ್ರೀ ಶಾಂತಲಿAಗೇಶ್ವರ ಸ್ವಾಮೀಜಿ, ಮಾದನಹಿಪ್ಪರಗಿಯ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಭಾಗವಹಿಸಲಿz್ದÁರೆ.

    ಕೆಕೆಆರ್‌ಡಿಬಿ ಮಾಜಿ ಅಧ್ಯP್ಷÀ ದತ್ತಾತ್ರೇಯ ಪಾಟೀಲï ರೇವೂರ್, ಶಾಸಕರಾದ ಎಂ.ವೈ.ಪಾಟೀಲï, ಬಿ.ಆರ್.ಪಾಟೀಲï, ಅಕ್ಕಲಕೋಟ ಕಾಂಗ್ರೆಸ್ ಅಧ್ಯP್ಷÀ ಶಂಕರ ಮೇತ್ರೆ, ತಹಸೀಲ್ದಾರ್ ಸಂಜುಕುಮಾರ ದಾಸರ್, ಸಿಪಿಐ ಪಂಡಿತ ಸಗರ, ವೈದ್ಯಾಧಿಕಾರಿ ರವಿ ಬಿರಾದಾರ, ತಾಪಂ ಇಒ ರಮೇಶ ಸುಲ್ಪಿ ಇತರರಿದ್ದರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts