ಭಿಕ್ಷೆ ಬೇಡಿಯಾದರೂ ದತ್ತು ಪಡೆದ ಹಳ್ಳಿಯನ್ನು ಉದ್ಧಾರ ಮಾಡ್ತೇನೆ ಎಂದ್ರು ಈ ನಟ

ಧಾರವಾಡ: ನಾನು ಅಯೋಗ್ಯ ಚಲನಚಿತ್ರದಿಂದ ಸ್ಫೂರ್ತಿಗೊಂಡಿದ್ದು ಉತ್ತರ ಕರ್ನಾಟಕದಲ್ಲಿ ಹಿಂದುಳಿದ ಹಳ್ಳಿಯೊಂದನ್ನು ದತ್ತು ಪಡೆಯುತ್ತೇನೆ ಎಂದು ನಟ ನೀನಾಸಂ ಸತೀಶ್​ ತಿಳಿಸಿದರು.

ಧಾರವಾಡದಲ್ಲಿ ಮಾತನಾಡಿ, ಈಗಾಗಲೇ ಮಂಡ್ಯ ಜಿಲ್ಲೆಯ ಹುಲ್ಲೆಗಾಲ​ ಗ್ರಾಮ ದತ್ತು ಪಡೆದಿದ್ದೇನೆ. ಮುಂದಿನ ಸಿನಿಮಾ ಮುಗಿದ ಬಳಿಕ ಉತ್ತರ ಕರ್ನಾಟಕದಲ್ಲಿ ಹಳ್ಳಿಯೊಂದನ್ನು ದತ್ತು ಪಡೆಯುತ್ತೇನೆ. ಭಿಕ್ಷೆ ಬೇಡಿಯಾದರೂ ಹಣ ತಂದು ಹಳ್ಳಿಯನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.

ಮಂಡ್ಯದಲ್ಲಿ ದತ್ತು ಪಡೆದ ಹಳ್ಳಿ ಪರಿಸ್ಥಿತಿ ಉತ್ತರ ಕರ್ನಾಟಕ ಭಾಗದ ಹಳ್ಳಿಗಳಷ್ಟು ಕೆಟ್ಟದಾಗಿಲ್ಲ. ನಾನು ದತ್ತು ತೆಗೆದುಕೊಂಡ ಬಳಿಕ ಅದನ್ನು ನೋಡಿಯಾದರೂ ಉಳ್ಳವರು, ಕೋಟ್ಯಧೀಶರು ಮುಂದೆ ಬರಲಿ. ಉತ್ತರ ಕರ್ನಾಟಕದಲ್ಲಿ ಯಾವ ಹಳ್ಳಿ ಅತ್ಯಂತ ಹಿಂದೆ ಉಳಿದಿದೆಯೆಂದು ಜನರೇ ತಿಳಿಸಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.