Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಬೀದಿನಾಯಿಗಳಿಗೆ ಆಶ್ರಯ ಕಲ್ಪಿಸಿದ ದತ್ತು ಸ್ವೀಕಾರ ಶಿಬಿರ

Sunday, 10.06.2018, 9:33 PM       No Comments

ಉಡುಪಿ: ಅಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಮುದ್ದಾದ ನಾಯಿಮರಿಗಳು. ಕೈಯಲ್ಲಿ ಹಿಡಿದು ಮುದ್ದಾಡುತ್ತಿದ್ದ ಮಕ್ಕಳು. ಪುಟಾಣಿಗಳಲ್ಲಿ ಮನೆಗೆ ಕರೆದುಕೊಂಡು ಹೋಗುವ ಸಂತಸ. ಅನಾಥವಾಗಿ ರಸ್ತೆ ಬದಿ ಸಿಕ್ಕಿದ್ದ ಮರಿಗಳಿಗೆ ಮತ್ತೆ ಮನೆ ಸೇರುವ ಭಾಗ್ಯ.

ಇಂಥ ವಾತಾವರಣ ಕಂಡುಬಂದಿದ್ದು ಮಣಿಪಾಲ ರೋಟರಿ ಭವನದಲ್ಲಿ. ಭಾನುವಾರ ಇಲ್ಲಿ ಕ್ಯಾಪ್ಟೆನ್ ಅನಿಮಲ್ ಕ್ಯಾರ್ ಟ್ರಸ್ಟ್ ಆಶ್ರಯದಲ್ಲಿ ನಾಯಿಮರಿಗಳ ದತ್ತು ಸ್ವೀಕಾರ ಶಿಬಿರ ನಡೆಯಿತು. ಇದರಲ್ಲಿ ಸಾರ್ವಜನಿಕರು ಭಾಗವಹಿಸಿ ತಮಗೆ ಇಷ್ಟವಾದ ನಾಯಿಮರಿಗಳನ್ನು ಉಚಿತವಾಗಿ ಮನೆಗೆ ತೆಗೆದುಕೊಂಡು ಹೋಗಿ ಸಾಕಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಟ್ರಸ್ಟ್‌ನ ಸದಸ್ಯರು ಬೀದಿಯಲ್ಲಿ ದೊರೆತ ನಾಯಿಗಳನ್ನು ತಂದು ಔಷಧೋಪಚಾರ ನೀಡಿ ಸಾಕುತ್ತಾರೆ. ಬಳಿಕ ಇಂಥ ಕ್ಯಾಂಪ್‌ಗಳನ್ನು ಆಯೋಜಿಸಿ ಅವಶ್ಯಕತೆ ಇರುವವರಿಗೆ ನೀಡುತ್ತಾರೆ. ಕಳೆದ ಹತ್ತು ವರ್ಷಗಳಿಂದ ಬೀದಿನಾಯಿಗಳ ಆರೈಕೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆ ಕಳೆದ ಬಾರಿ ಇಂಥ ಶಿಬಿರ ಆಯೋಜಿಸಿ ಮರಿಗಳನ್ನು ಉಚಿತವಾಗಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಈ ಬಾರಿಯೂ ಮಣಿಪಾಲದಲ್ಲಿ ಶಿಬಿರ ನಡೆದಿದೆ. ಟ್ರಸ್ಟ್‌ನಿಂದ ಪ್ರತಿ ತಿಂಗಳು 3 ದಿನ 60 ಬೀದಿ ನಾಯಿಗಳಿಗೆ ಸರ್ಜರಿ ನಡೆಸಿ ಮತ್ತೆ ಬಿಡಲಾಗುತ್ತದೆ. ಒಂದು ನಾಯಿಗೆ ಇದಕ್ಕಾಗಿ 1,500 ರೂ.ವ್ಯಯಿಸಲಾಗುತ್ತದೆ ಎನ್ನುತ್ತಾರೆ ಟ್ರಸ್ಟ್‌ನ ಸದಸ್ಯೆ ಗಾಯತ್ರಿ.
ಶಿಬಿರದಲ್ಲಿದ್ದ 17 ನಾಯಿ ಮರಿಗಳಲ್ಲಿ 15 ಮರಿಗಳನ್ನು ಸಾರ್ವಜನಿಕರು ದತ್ತು ಸ್ವೀಕರಿಸಿದ್ದಾರೆ. ಇದರಲ್ಲಿ ಎಲ್ಲಾ ಲೋಕಲ್ ಬ್ರೀಡ್‌ನ ಮರಿಗಳನ್ನು ದತ್ತು ಸ್ವೀಕರಿಸಿರುವುದು ವಿಶೇಷ.

Leave a Reply

Your email address will not be published. Required fields are marked *

Back To Top