ವಿದೇಶಿ ಸಂಸ್ಕೃತಿ ಅಳವಡಿಸಿ ನಮ್ಮ ಪರಂಪರೆ ಅಳಿವಿನಂಚಿಗೆ

ಚಿಕ್ಕಮಗಳೂರು: ಇಂದು ನಮ್ಮ ಮಕ್ಕಳು ವಿದೇಶಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಫಲವಾಗಿ ನಮ್ಮ ಪರಂಪರೆ ಅಳಿವಿನಂಚಿನಲ್ಲಿದೆ ಎಂದು ಚಿಕ್ಕಮಗಳೂರು ಹೆಬ್ಬಾರ್ ವೈಷ್ಣವ ಉಪಸಭಾ ಅಧ್ಯಕ್ಷ ಎಚ್.ಆರ್.ಮೋಹನ್ ವಿಷಾದಿಸಿದರು.

ನಗರದ ಹಿರೇಮಗಳೂರು ಕಲ್ಯಾಣ ಮಂಟಪದಲ್ಲಿ ನಡೆದ ಹೆಬ್ಬಾರ್ ಶ್ರೀವೈಷ್ಣವ ಉಪಸಭಾದ ಸರ್ವ ಸದಸ್ಯರ ವಾರ್ಷಿಕ ಸಮಾಗಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆ ಹಿರಿಯರು ಮಕ್ಕಳಿಗೆ ಸಂಪ್ರದಾಯ, ಸಂಸ್ಕೃತಿ, ಪೂಜೆ, ಪುನಸ್ಕಾರಗಳ ಜೊತೆಗೆ ಸಂಸ್ಕಾರವನ್ನು ಕಲಿಸುವ ಕ್ರಮವಿತ್ತು. ಇಂದು ಅವುಗಳಿಗೆ ಅವಕಾಶವಿಲ್ಲದೆ ಇಡೀ ಸಂಸ್ಕೃತಿಯೇ ಮರೆಯಾಗುವ ಆತಂಕ ಎದುರಾಗಿದೆ ಎಂದರು.
ಕೇವಲ ಸಮಾರಂಭಗಳಾಗದೆ ಹಿರಿಯರ ಮಾರ್ಗದರ್ಶನ ಹಾಗೂ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಯುವಕರು ಮುಂದುವರಿದಲ್ಲಿ ಸಂಘ-ಸAಸ್ಥೆಗಳು ಬೆಳವಣಿಗೆ ಕಾಣಲು ಸಾಧ್ಯ. ಕೇವಲ ವಿದೇಶದಲ್ಲಿ ವ್ಯಾಸಂಗ ಮಾಡಿದ ಮಾತ್ರಕ್ಕೆ ತಂದೆ-ತಾಯಿಯನ್ನು ದೂರವಿಟ್ಟು ವೃದ್ಧಾಪ್ಯದಲ್ಲಿ ಅವರ ಯೋಗಕ್ಷೇಮ ಕಾಯ್ದುಕೊಳ್ಳದೇ ಇರುವುದು ಬೇಸರದ ಸಂಗತಿ. ಇಂದು ಅಂತಹ ಕುಟುಂಬಗಳು ಹೆಚ್ಚಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಕೇಂದ್ರದ ಸಭಾದೊಂದಿಗೆ ವ್ಯವಹರಿಸಿ ಅರ್ಚಕರಿಗೆ, ಅಂಗವಿಕಲರಿಗೆ ಮಾಸಾಶನ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾಸಭಾ ಕಾರ್ಯದರ್ಶಿ ಎಚ್.ಕೆ.ಎಸ್.ಪ್ರಸಾದ್, ಹೆಬ್ಬಾರ್ ಸಮಾಜವು ಸಮುದಾಯದ ಹಿತಾಸಕ್ತಿ ಕಾಪಾಡುವ ಸಲುವಾಗಿ ಬಹಳ ಅಚ್ಚುಕಟ್ಟಾಗಿ ಚಟುವಟಿಕೆಗಳನ್ನು ನಡೆಸುತ್ತಿದೆ. ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ ಎಂದು ಹೇಳಿದರು.
ಖಜಾಂಚಿ ಎಚ್.ಕೆ. ಮೋಹನ್ ವಾರ್ಷಿಕ ವರದಿ ಮಂಡಿಸಿದರು. ಇದೇ ಸಂದರ್ಭದಲ್ಲಿ ೭೦ ವರ್ಷ ಮೇಲ್ಪಟ್ಟ ಹಿರಿಯ ದಂಪತಿಗಳನ್ನು ಸಭಾದಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ರಮಾಪ್ರಸಾದ್, ಎಚ್.ಕೆ.ಬಾಲಾಜಿ ಉಪಸ್ಥಿತರಿದ್ದರು.

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…