ಲೋಕಾಪುರ: ಆದಿ ಶಂಕರಾಚಾರ್ಯರು ತಮ್ಮ ನಿಶ್ಚಲ ಧರ್ಮಭಾವನೆಯಿಂದ ಭಾರತ ದೇಶವನ್ನೆಲ್ಲ ಸಂಚರಿಸಿ ಹಿಂದು ಧರ್ಮದ ತತ್ವವನ್ನು ಜನಮಾನಸದಲ್ಲಿ ಬಿತ್ತಿದರು ಎಂದು ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಜ್ಞಾನೇಶ್ವರ ಮಠದಲ್ಲಿ ಆಯೋಜಿಸಿದ್ದ ಆದಿಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯಲ್ಲಿ ಮಾತನಾಡಿದ ಅವರು, ಅಹಂ ಬ್ರಹ್ಮಾಸ್ಮಿ ಎಂಬ ಮಹಾವಾಕ್ಯದ ಮೂಲಕ ಈ ಜಗತ್ತಿನ ಪ್ರತಿ ಜೀವಿಯಲ್ಲೂ ದೈವತ್ವವಿದೆ ಎಂಬ ಸತ್ಯ ಸಾರಿದ್ದಾರೆ ಎಂದರು.
ಕಲಾವಿದ ಹಾಗೂ ಸಮಾಜ ಸೇವಕ ಕೃಷ್ಣ ಭಜಂತ್ರಿ ಮಾತನಾಡಿ, ಶಂಕರಚಾರ್ಯರ ತತ್ವ, ಆದರ್ಶ ಇಂದಿನ ಯುವ ಜನತೆ ಅಳವಡಿಸಿಕೊಳ್ಳಬೇಕು. ಶಂಕರಾಚಾರ್ಯರು ಬೋಧಿಸಿದಂತೆ ನಾವೆಲ್ಲರೂ ಒಳಗೆ ದೈವತ್ವವನ್ನು ಧರಿಸಿಕೊಂಡವರಾಗಿದ್ದೇವೆ. ಈ ತತ್ವವನ್ನು ಜೀವನದೊಳಗೆ ಅಳವಡಿಸಿಕೊಂಡಾಗ ಪ್ರಪಂಚವೇ ದೇವಮಯವಾಗುತ್ತದೆ ಎಂದರು.
ಜ್ಞಾನೇಶ್ವರ ಮಠದ ಸದ್ಭಕ್ತಿ ಮಂಡಳಿ ಉಪಸ್ಥಿತರಿದ್ದರು.
TAGGED:ಲೋಕಾಪುರ