ಕಲಾದಗಿ: ಯುವಕರು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ನೊಂದಿರುವ ದುರ್ಬಲ ವರ್ಗದವರ ಸೇವೆಗೆ ಸಮರ್ಪಿಸಿಕೊಳ್ಳುವುದು ರೆಡ ಕ್ರಾಸ ಸಂಸ್ಥೆಯ ಉದ್ದೇಶವಾಗಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಯೋಜಕ ಡಾ.ಯಲ್ಲಪ್ಪ ಜೀ ಹೇಳಿದರು.

ಸ್ಥಳಿಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಿನಲ್ಲಿ ಬರುವ ಅಡೆತಡೆಗಳನ್ನು ಹೋಗಲಾಡಿಸಲು ಮತ್ತೊಬ್ಬರಿಗೆ ಸಹಾಯ ಸಹಕಾರ ನೀಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ. ಎಚ್.ಬಿ. ಮಹಾಂತೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವಕರಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಯುವಕರು ತಮ್ಮ ಜವಾಬ್ದಾರಿಗಳನ್ನು ಮರೆಯದೆ ಹಿರಿಯರ, ವೃದ್ಧರ ಅವಶ್ಯಕತೆಗಳಿಗೆ ಸಹಾಯ ಮಾಡುವುದನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರಾಧ್ಯಾಪಕಿ ಡಾ. ಎಚ್.ಎ. ಬಿಂದು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಾದ್ಯಾಪಕಿಯರಾದ ಡಾ. ಸರೋಜಿನಿ ಹೊಸಕೇರಿ, ಸಿ.ವೈ. ಮೆಣಸಿನಕಾಯಿ, ಮೌಲಾಸಾಬ ಮುಲ್ಲಾ ಇದ್ದರು. ಪ್ರಾದ್ಯಾಪಕಿ ಯಂಕಮ್ಮ ಸ್ವಾಗತಿಸಿದರು, ಡಾ. ಪುಂಡಲೀಕ ಹುನ್ನಳ್ಳಿ ನಿರೂಪಿಸಿದರು, ಶ್ರೀದೇವಿ ಮುಂಡಗನೂರ ವಂದಿಸಿದರು.