ಸೇವಾ ಭಾರತಿ ಸಂಸ್ಥೆಯ ಸೇವೆ ಅಮೂಲ್ಯ: ಶಿವಣ್ಣ
ವಿಜಯವಾಣಿ ಸುದ್ದಿಜಾಲ ಗದಗ
ಜನಮುಖಿ, ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿರುವ ಸೇವಾ ಭಾರತಿ ಟ್ರಸ್ಟ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ಸೇವೆ ಅಮೂಲ್ಯವಾದದ್ದು ಎಂದು ನಗರಸಭೆಯ ಮಾಜಿ ಅಧ್ಯ ಶಿವಣ್ಣ ಮುಳಗುಂದ ಹೇಳಿದರು.
ಸೋಮವಾರ ಬೆಟಗೇರಿಯ ಸೇವಾಭಾರತಿ ಅಮೂಲ್ಯ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಪೋಷಣೆಗೊಂಡ ಗಂಡು ಮಗುವನ್ನು ಮೈಸೂರ ಜಿಲ್ಲೆಯ ಕೇತುಪುರ ಗ್ರಾಮದ ಮಕ್ಕಳಿಲ್ಲದ ದಂಪತಿಗಳಿಗೆ ಹಸ್ತಾಂತರಿಸಿ ಮಾತನಾಡಿದರು. ಹೆತ್ತವರಿಗೆ ಬೇಡವಾದ ಮಗುವನ್ನು ಸಂರಸಿ ಪೋಷಿಸಿ ಮಕ್ಕಳಿಲ್ಲದ ದಂಪತಿಗಳ ಮಡಿಲಿಗೆ ಕಾನೂನಿನ ಚೌಕಟ್ಟಿನಲ್ಲಿ ದತ್ತು ನೀಡುವ ಕಾರ್ಯವನ್ನು ಮಾಡುತ್ತಿರುವ ಈ ಸಂಸ್ಥೆಯ ಕಾರ್ಯ ಮಾನವೀಯತೆ ಹಾಗೂ ಪುಣ್ಯದ ಕೆಲಸವಾಗಿದೆ. ಒಬ್ಬರಿಗೆ ಬೇಡವಾದ ಮಗು ಇನ್ನೊಬ್ಬರಿಗೆ ಮುದ್ದು ಅಷ್ಟೇ ಅಲ್ಲ ಮಗುವಿಗೆ ಭವ್ಯ ಭವಿಷ್ಯ ನಿರ್ಮಾಣಕ್ಕೆ ಈ ಸಂಸ್ಥೆ ಕೊಂಡಿಯಾಗಿ ಕಾರ್ಯ ಮಾಡುತ್ತಿರುವದು ಅಭಿನಂದನೀಯ ಎಂದರು.
ಸಂ, ಸಂಸ್ಥೆಗಳನ್ನು ಕಟ್ಟುವದು, ಮುನ್ನಡೆಸುವದು ಬಹು ಕಷ್ಟದ ಕೆಲಸ ಸೇವಾ ಭಾರತಿ ಟ್ರಸ್ಟ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆ ಗದಗ ಪರಿಸರದಲ್ಲಿ ಒಳ್ಳೆಯ ಕಾರ್ಯ ಮಾಡುತ್ತಿದೆ. ಈ ಸೇವಾ ಕಾರ್ಯದಲ್ಲಿ ತಮ್ಮನ್ನು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡ ಸೇವಾಕರ್ತರಿ ನಿಜಕ್ಕೂ ಅಭಿನಂದನೆಗೆ ಯೋಗ್ಯ ಎಂದರು.
ಸಖಿ ಒನ್ ಕೇಂದ್ರದ ಅಧೀಕಿ ಸುಜಾತಾ ಶಾಸ್ತ್ರೀಮಠ ಮಾತನಾಡಿ, ಮನುಷತ್ವ ಮತ್ತು ಮಾನವೀಯತೆಯನ್ನು ಮಿಡಿಯುವ ಈ ಸಮಯ ಅವಿಸ್ಮರಣೀಯವಾಗಿದೆ. ಮಗುವಿನ ಭವಿಷ್ಯದ ದಿಕ್ಕು ಬದಲಿಸುವ ಪರ್ವ ಕಾಲವಿದು ಎಂದರು. ಸಂಸ್ಥೆಯ ಅಧ್ಯ ಮಲ್ಲಿಕಾರ್ಜುನ ಬೆಲ್ಲದ ಮಾತನಾಡಿ, ಇದು ಮನ ಮಿಡಿಯುವ ಸಂದರ್ಭ ಮಾತು ಕೃತಿಯಾಗಿ ಪರಿವರ್ತನೆಗೊಳ್ಳುವ ಕಾಲಟ್ಟ. ದತ್ತು ಮಗುವನ್ನು ಪಡೆದ ದಂಪತಿಗಳು ಮಗುವಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಬದ್ಧತೆಯಿಂದ ಕಾಯೋರ್ನ್ಮುಖರಾಗಲಿ ಎಂದರು.
ಉಮಾ ಚನ್ನಪ್ಪನವರ, ಸುಭಾಸ ಬಬಲಾದಿ, ಮಂಜುನಾಥ ಚನ್ನಪ್ಪನವರ, ನಾಗವೇಣಿ ಕಟ್ಟಿಮನಿ, ನರಸಿಂಹ ಕಾಮಾತಿರ್, ರಾಜೇಶ ಖಟವಟೆ, ಲಲಿತಾಬಾಯಿ ಮೇರವಾಡೆ, ಗುರುಸಿದ್ಧಪ್ಪ ಕೊಣ್ಣೂರ, ಅನಿಲ ಗಡ್ಡಿ, ಬಸವರಾಜ ನಾಗಲಾಪೂರ, ಗಣೇಶ ಮಾಗುಂಡ, ಆನಂದಪ್ಪ ಅಂಟಿನ, ಜೀತೇಂದ್ರ ಶಹಾ, ಬಸವರಾಜ ಪಲ್ಲೇದ, ಅಭಿಷೇಕ ಮಾಳೋದೆ, ಪ್ರಮೋದ ಹಿರೇಮಠ ಹಲವರು ಇದ್ದರು.