ಶಿಸ್ತು, ಸಂಸ್ಕಾರ, ಜೀವನ ಮೌಲ್ಯ ಅಳವಡಿಸಿಕೊಳ್ಳಿ

ಚಿಕ್ಕಮಗಳೂರು: ಶಿಸ್ತು, ಸಂಸ್ಕಾರ, ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳದೆ ಪರೀಕ್ಷೆಯಲ್ಲಿ ಮಾತ್ರ ಶೇ. ೯೯ರಷ್ಟು ಅಂಕ ಗಳಿಸಿದರೆ ಅದು ಶೂನ್ಯಕ್ಕೆ ಸಮಾನವಾಗುತ್ತದೆ ಎಂದು ವಕೀಲರಾದ ಡಿ.ಎಸ್.ಮಮತಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಆದಿಚುಂಚನಗಿರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಸಕ್ತ ಸಾಲಿನ ಪ್ರಥಮ ವರ್ಷದ ತರಗತಿ ಪ್ರವೇಶ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಪೋಕ್ಸೋ ಪ್ರಕರಣಗಳು ಹಾಗೂ ಲಿಂಗ ಸೂಕ್ಷö್ಮತೆ ವಿಚಾರಗಳ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರು, ಹಿರಿಯರು, ಅಜ್ಜ, ಅಜ್ಜಿ, ಸಂಬAಧಿಕರಿಗೆ ಗೌರವ ಕೊಡುವುದನ್ನು ಮೊದಲು ಕಲಿಯಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಉಗುರು ಕತ್ತರಿಸದಿರುವುದು ಸೇರಿದಂತೆ ಕಂಡ ಕಂಡಲ್ಲಿ ಉಗುಳುವಂಥ ದುರಭ್ಯಾಸಗಳನ್ನು ತಿದ್ದಿಕೊಳ್ಳಬೇಕು. ಬದುಕು ಸುಂದರವಾಗಿರಬೇಕಾದಲ್ಲಿ ನಗು ಮತ್ತು ಮೌನವನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಎಂತಹ ಸಂದರ್ಭವನ್ನಾದರೂ ಸಮರ್ಥವಾಗಿ ಎದುರಿಸಬಹುದು ಎಂದು ಸಲಹೆ ನೀಡಿದರು.
ಅಬಲಾಶ್ರಮಗಳು, ದತ್ತು ಕೇಂದ್ರಗಳು, ವೃದ್ಧಾಶ್ರಮಗಳಂತಹ ಕಡೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕು. ಸಂವಿಧಾನ, ಭಗವದ್ಗೀತೆ, ವಚನಗಳನ್ನು ಓದಿಕೊಳ್ಳಬೇಕು. ಅದರಲ್ಲಿರುವ ಅರ್ಥಪೂರ್ಣ ಪದಗಳನ್ನು ಮನನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಸಂಬAಧಿಸಿದAತೆ ಪೋಕ್ಸೋ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಇಲ್ಲಿ ಮಕ್ಕಳು ಎಂದ ಕೂಡಲೇ ಹೆಣ್ಣು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳು ಮಾತ್ರ ಕಣ್ಣ ಮುಂದೆ ಬರುತ್ತದೆ. ಆದರೆ ಗಂಡು ಮಕ್ಕಳ ಮೇಲೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತವೆ. ಅದೂ ಸಹ ಗಂಭೀರ ಅಪರಾಧವೇ ಆಗಿರುತ್ತದೆ. ಹೆಣ್ಣು ಮತ್ತು ಗಂಡು ಮಕ್ಕಳ ಮೇಲೆ ನಡೆಯುವ ಎಲ್ಲಾ ದೌರ್ಜನ್ಯಗಳಿಗೂ ಪೋಕ್ಸೋ ಅನ್ವಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಸಾಕಷ್ಟು ಕಾನೂನು, ಕಟ್ಟಳೆ, ತಿದ್ದುಪಡಿಗಳು ಬರುತ್ತಲೇ ಇದ್ದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರತಿಯೊಬ್ಬರು ಪ್ರತಿ ಹೆಣ್ಣಿನಲ್ಲೂ ದೈವತ್ವವನ್ನು ಕಾಣಬೇಕು ಹಾಗೂ ಅವರಿಗೆ ಗೌರವ ನೀಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಚಾಲನಾ ಪರವಾನಗಿ ಇಲ್ಲದೆ ವಾಹನಗಳನ್ನು ಓಡಿಸಬಾರದು. ಯಾರದ್ದೋ ವಾಹನಗಳನ್ನು ಓಡಿಸುವಾಗ ವಿಮೆ ಸೇರಿದಂತೆ ಸೂಕ್ತ ದಾಖಲೆಗಳು ಇವೆಯೇ ಎನ್ನುವುದನ್ನು ದೃಢಪಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಉಪ ಪ್ರಾಚಾರ್ಯ ಸಿದ್ದಣ್ಣ, ಉಪನ್ಯಾಸಕಿ ವಿ.ಕೆ.ಮಧುರ, ಎನ್.ಸಾಯಿ ನಂದನ್ ಉಪಸ್ಥಿತರಿದ್ದರು.

Share This Article

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..

ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…