More

  ಕಿಡ್ನಿ ವೈಫಲ್ಯ ತಡೆಗಟ್ಟಲು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಿ: ಡಾ. ಅನಿಕೇತ್ ಪ್ರಭಾಕರ್

  ಮೈಸೂರು: ಕಿಡ್ನಿ ವೈಫಲ್ಯ ತಡೆಗಟ್ಟಲು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ನೆಫ್ರೊಲೊಜಿಸ್ಟ್ ಡಾ. ಅನಿಕೇತ್ ಪ್ರಭಾಕರ್ ಹೇಳಿದರು.

  ನಗರದ ಸರಸ್ವತಿಪುರಂನ ಸಿಗ್ಮಾ ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಕಿಡ್ನಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಮಧುಮೇಹ, ರಕ್ತದೊತ್ತಡ, ನೀರನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಹಾಗೂ ನೋವು ನಿವಾರಕ ಮಾತ್ರೆಗಳನ್ನು ದೀರ್ಘ ಕಾಲ ಸೇವಿಸುವವರಲ್ಲಿ ಹೆಚ್ಚಾಗಿ ಕಿಡ್ನಿ ವೈಫಲ್ಯ ಕಂಡು ಬರುತ್ತಿದೆ ಎಂದರು.

  ಕಿಡ್ನಿ ರೋಗಕ್ಕೆ ಎಲ್ಲ ರೀತಿಯ ಚಿಕಿತ್ಸೆ ನಮ್ಮ ಆಸ್ಪತ್ರೆಯಲ್ಲಿ ದೊರೆಯುತ್ತದೆ. ಆಸ್ಪತ್ರೆಯಲ್ಲಿ ಇದುವರೆಗೆ 50 ಕಿಡ್ನಿ ಕಸಿ ಮಾಡಲಾಗಿದೆ. ಕಿಡ್ನಿ ಯ ಆರೋಗ್ಯ ಕಾಪಾಡಿಕೊಳ್ಳಲು ವೈದ್ಯರು ಸೂಚಿಸುವಷ್ಟು ನೀರು ಸೇವಿಸಬೇಕು. ಮದ್ಯಪಾನ, ಧೂಮಪಾನದಿಂದ ದೂರ ಇರಬೇಕು. ಪ್ರತಿನಿತ್ಯ 20 ನಿಮಿಷವಾದರೂ ವಾಕಿಂಗ್ ಮಾಡಬೇಕು. 40 ವರ್ಷ ಮೇಲ್ಪಟ್ಟ ಮಧುಮೇಹ ಹಾಗೂ ರಕ್ತದ ಒತ್ತಡ ಇರುವವರು ವರ್ಷಕ್ಕೆ ಒಂದು ಬಾರಿ ಕಡ್ಡಾಯವಾಗಿ ಕಿಡ್ನಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

  ಆಸ್ಪತ್ರೆಯ ಯೂರಾಲಜಿಸ್ಟ್ ಡಾ.ಮಾದಪ್ಪ ಮಾತನಾಡಿ, ಆರಂಭಿಕ ಹಂತದಲ್ಲಿಯೇ ಕಿಡ್ನಿ ಕಾಯಿಲೆಗಳನ್ನು ಗುರುತಿಸಿದರೆ ಕಿಡ್ನಿ ವೈಫಲ್ಯವನ್ನು ತಡೆಗಟ್ಟಬಹುದು. ಬಿಪಿಎಲ್ ಹಾಗೂ ಆಯುಷ್ಮಾನ್ ಕಾರ್ಡ್ ಇದ್ದರೆ ಚಿಕಿತ್ಸಾ ವೆಚ್ಚ ಸಂಪೂರ್ಣ ಉಚಿತವಾಗಲಿದೆ. ಕಿಡ್ನಿ ಕಾಯಿಲೆಗಳ ಚಿಕಿತ್ಸೆಯಲ್ಲಿ ಸಿಗ್ಮಾ ಆಸ್ಪತ್ರೆಯು ಮುಂಚೂಣಿಯಲ್ಲಿದೆ ಎಂದು ಹೇಳಿದರು.

  ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಜ್ಞಾನಶಂಕರ್ ಮಾತನಾಡಿ, ಕಿಡ್ನಿ ಆರೈಕೆ ಎಲ್ಲರಿಗೂ ದೊರೆಯಬೇಕು ಎಂಬ ನಿಟ್ಟಿನಲ್ಲಿ ನಮ್ಮ ಆಸ್ಪತ್ರೆಯು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಈ ಸಂದರ್ಭ ಆಸ್ಪತ್ರೆಯ ಮಕ್ಕಳತಜ್ಞೆ ಡಾ. ರಾಜೇಶ್ವರಿ ಮಾದಪ್ಪ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts