ಅರಮನೆ, ಮೃಗಾಲಯ ಪ್ರವೇಶ ಮುಕ್ತ ಇಂದು

ಮೈಸೂರು: ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಅಂಬಾವಿಲಾಸ ಅರಮನೆ ಮತ್ತು ಮೈಸೂರು ಮೃಗಾಲಯ ಜೂ.8 ರಿಂದ ಸಾರ್ವಜ ನಿಕರ ಪ್ರವೇಶಕ್ಕೆ ಮುಕ್ತಗೊಳ್ಳಲಿದೆ. ಕರೊನಾ ಹಿನ್ನೆಲೆಯಲ್ಲಿ ಮಾ.15 ರಿಂದ ಮೃಗಾಲಯ ಹಾಗೂ ಅರಮನೆ ಬಂದ್ ಆಗಿತ್ತು. 84 ದಿನಗಳ ನಂತರ ಮೃಗಾಲಯ, ಅರಮನೆ ಸಾರ್ವಜನಿಕರಿಗೆ ತೆರೆದುಕೊಳ್ಳುತ್ತಿದೆ.

ಅರಮನೆ ವೀಕ್ಷಣೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ಕೈಗಳಿಗೆ ಸ್ಯಾನಿಟೈಸರ್ ಬಳಕೆ ಮಾಡಬೇಕು. 10 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಅರಮನೆ ವೀಕ್ಷಣೆಗೆ ಅವಕಾಶ ಇಲ್ಲ. ಪ್ರವಾಸಿಗರು ತಮ್ಮ ಲಗೇಜ್‌ಗಳನ್ನು ವಾಹನದಲ್ಲಿಯೇ ಬಿಟ್ಟು ಬರಬೇಕು. ಒಂದು ವೇಳೆ ಲಗೇಜ್‌ಗಳನ್ನು ತಂದರೆ ಲಗೇಜ್‌ಗಳಿಗೆ ಸೋಂಕು ನಿವಾರಕ ಔಷಧ ಸಿಂಪಡಿಸಲಾಗುತ್ತದೆ. ಒಂದು ಗಂಟೆಯ ಅವಧಿಯಲ್ಲಿ 350 ಜನರಿಗೆ ಮಾತ್ರ ಅರಮನೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ. ಪ್ರತಿ ವ್ಯಕ್ತಿಗಳ ನಡುವೆ 6 ಅಡಿ ಅಂತರ ಕಾಯ್ದುಕೊಳ್ಳಲಾಗುವುದು.

ಮೃಗಾಲಯದಲ್ಲಿ ಸುರಕ್ಷತಾ ಕ್ರಮ: ಮೃಗಾಲಯದ ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಷ್ಟು ಪ್ರವಾಸಿಗರನ್ನು ಮಾತ್ರ ಒಳಗೆ ಬಿಟ್ಟುಕೊಳ್ಳ ಲಾಗುವುದು. ಮೃಗಾಲಯ ವೀಕ್ಷಣೆಗೆ ಒಬ್ಬ ವ್ಯಕ್ತಿಗೆ ಒಟ್ಟು 3 ಗಂಟೆ ನಿಗದಿ ಪಡಿಸಲಾಗಿದೆ. ಮೃಗಾಲಯದ ಎರಡು ಕಾಲುದಾರಿಯಲ್ಲಿ ಪ್ರವಾಸಿಗರು ಸಾಮಾಜಿಕ ಅಂತರ ಕಾಯ್ದುಕೊಂಡು ಸಾಗಬೇಕು. ಬ್ಯಾಟರಿ ಚಾಲಿತ ವಾಹನ ಸಾಗಲು 2 ಮೀಟರ್ ಜಾಗ ಬಳಕೆ ಮಾಡಿಕೊಳ್ಳಲಾಗುವುದು. ಒಬ್ಬರಿಂದ ಒಬ್ಬರಿಗೆ 2 ಮೀಟರ್ ಅಂತರ ಕಾಯ್ದುಕೊಳ್ಳಲಾಗುವುದು. ಒಂದು ಗಂಟೆ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು 1,000 ಪ್ರವಾಸಿಗರನ್ನು ಒಳಗೆ ಬಿಟ್ಟುಕೊಳ್ಳಲು ಅವಕಾಶವಿದೆ. ಈ ಲೆಕ್ಕಾಚಾರ ಪ್ರಕಾರ ಒಂದು ದಿನದಲ್ಲಿ 8,000 ಜನರು ಮೃಗಾಲಯಕ್ಕೆ ಭೇಟಿ ನೀಡಬಹುದು.

ಪ್ರತಿಯೊಬ್ಬರೂ ಮೆಡಿಕೇಟೆಡ್ ಫುಟ್ ಮ್ಯಾಟ್‌ಗೆ ಪಾದರಕ್ಷೆಗಳನ್ನು ಸ್ಪರ್ಶಿಸಿ ಮುಂದೆ ಸಾಗಬೇಕು. ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ಬಳಸುವುದು ಕಡ್ಡಾಯ. ಮಾಸ್ಕ್ ಇಲ್ಲದೆ ಇದ್ದರೆ ಕೌಂಟರ್‌ನಲ್ಲಿ ಖರೀದಿಸಬೇಕು. ಪ್ರವೇಶ ದ್ವಾರದಲ್ಲಿ ದೇಹದ ಉಷ್ಣಾಂಶದ ಪರೀಕ್ಷೆ ನಡೆಸಲಾಗುವುದು. ಮೃಗಾಲಯ ವೀಕ್ಷಣೆ ಸಂದರ್ಭದಲ್ಲಿ ಶೌಚಗೃಹ, ಕುಡಿಯುವ ನೀರು, ಅಂಗಡಿ ಮಳಿಗೆ, ಬ್ಯಾಟರಿ ಚಾಲಿತ ವಾಹನ ಸೇರಿದಂತೆ ವಿವಿಧೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮೃಗಾಲಯದಲ್ಲಿ ಉಗುಳುವುದು ಅಥವಾ ಗ್ರಿಲ್ ಮುಂತಾದವುಗಳನ್ನು ಸ್ಪರ್ಶಿಸುವುದಕ್ಕೆ ಅವಕಾಶವಿಲ್ಲ. ಪ್ರವಾಸಿಗರು ಬಳಕೆ ಮಾಡುವ ಮಾಸ್ಕ್‌ಅನ್ನು ವಿಲೇವಾರಿ ಮಾಡಲು ಪ್ರತ್ಯೇಕ ಹಳದಿ ಬಣ್ಣದ ಕಸದ ಬುಟ್ಟಿಯನ್ನು ವಿವಿಧೆಡೆ ಇರಿಸಲಾಗಿದೆ.

1000 ರೂ. ದಂಡ: ಪ್ರತಿಯೊಂದು ಪ್ರವಾಸಿಗರ ಮೇಲೆ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗುವುದು. ಒಂದುವೇಳೆ ನಿಯಮ ಉಲ್ಲಂಘಿಸಿದರೆ ತಲಾ 1,000 ರೂ. ದಂಡ ವಿಧಿಸಲಾಗುವುದು. ಮೃಗಾಲಯ ಸಿಬ್ಬಂದಿ ಕೂಡ ಎಲ್ಲ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು.ಪ್ರಾಣಿಗಳ ಪಾಲನೆ ಮಾಡುವ ಸಿಬ್ಬಂದಿ ಅಗತ್ಯ ಸುರಕ್ಷತಾ ಕ್ರಮಗಳನ್ನು ವಹಿಸುವ ಜತೆಗೆ ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ಪ್ರಾಣಿಗಳ ಆರೋಗ್ಯದಲ್ಲಿ ಯಾವುದೇ ರೀತಿಯ ಏರು ಪೇರು ಕಂಡುಬಂದರೆ ತಕ್ಷಣ ಮೃಗಾಲಯದ ಪಶುಪಾಲನಾ ವಿಭಾಗಕ್ಕೆ ತಿಳಿಸಬೇಕು. ಶೀತ, ಜ್ವರ, ಕೆಮ್ಮು ಲಕ್ಷಣ ಇರುವವರಿಗೆ ಪ್ರವೇಶವಿಲ್ಲ.

Share This Article

A. P. J. Abdul Kalam ಅವರ ಈ ಟ್ರಿಕ್ಸ್​​ಗಳನ್ನು ವಿದ್ಯಾರ್ಥಿಗಳು ಓದುವಾಗ ಮಿಸ್​ ಮಾಡ್ದೆ ಅನುಸರಿಸಿ

ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿರುವ ಭಾರತದ ಮಹಾನ್ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್…

ಹೊಳೆಯುವ ಮುತ್ತಿನಂತಹ ಹಲ್ಲುಗಳಿಗೆ ಈ ಟಿಪ್ಸ್ ಫಾಲೋ ಮಾಡಿ..! Home Remedies

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಮುತ್ತಿನಂತೆ ಬಿಳಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಏಕೆಂದರೆ.. ನಮ್ಮ…

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…