More

  ಚಾಂಪಿಯನ್​ಗೆ ಜತೆಯಾದ ಅದಿತಿ

  ಬೆಂಗಳೂರು: ಇತ್ತೀಚೆಗಷ್ಟೇ ‘ಬ್ರಹ್ಮಚಾರಿ’ಗೆ ಜತೆಯಾಗಿದ್ದ ನಟಿ ಅದಿತಿ ಪ್ರಭುದೇವ ಇದೀಗ ‘ಚಾಂಪಿಯನ್’ಗೆ ಜತೆಯಾಗಿದ್ದಾರೆ. ಅಂದರೆ ಅವರು ‘ಚಾಂಪಿಯನ್’ ಶೀರ್ಷಿಕೆಯ ಸಿನಿಮಾದಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಶಾಹುರಾಜ್ ಶಿಂಧೆ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ಸಚಿನ್ ಧನಪಾಲ್ ಹೀರೋ ಆಗಿದ್ದು, ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ‘ಚಾಂಪಿಯನ್ ಹೆಸರೇ ಸೂಚಿಸುವಂತೆ ಇದರಲ್ಲಿ ಸ್ಪೋರ್ಟ್ಸ್ ಎಲಿಮೆಂಟ್ ಇದ್ದರೂ ಅದರೊಂದಿಗೆ ಪ್ರೀತಿ, ಹಾಸ್ಯ ಕೂಡ ಇರಲಿದೆ. ಚಿತ್ರದಲ್ಲಿ ನಾಯಕ-ನಾಯಕಿ ಇಬ್ಬರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ’ ಎಂಬ ಮಾಹಿತಿ ನೀಡುತ್ತಾರೆ ನಿರ್ದೇಶಕರು.

  ‘ಅದಿತಿ ಇಲ್ಲಿ ಸಂಪ್ರದಾಯಸ್ಥ ಮನೆತನದ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರದಲ್ಲಿ ದೇವರಾಜ್, ಅವಿನಾಶ್, ರಂಗಾಯಣ ರಘು, ಚಿಕ್ಕಣ್ಣ, ಸುಮನ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ’ ಎನ್ನುತ್ತಾರೆ ಶಿಂಧೆ. ವಿಶೇಷವೆಂದರೆ, ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಮರಾಠಿ ಭಾಷೆಯಲ್ಲೂ ಮೂಡಿಬರಲಿದೆ. ಹಾಗಂತ ಕನ್ನಡ ಚಿತ್ರವನ್ನು ಮರಾಠಿಗೆ ಡಬ್ ಮಾಡುತ್ತಿಲ್ಲ. ಬದಲಿಗೆ ಮರಾಠಿಯಲ್ಲಿ ಪ್ರತ್ಯೇಕವಾಗಿ ಶೂಟಿಂಗ್ ನಡೆಸಲಾಗವುದು. ಮರಾಠಿಯಲ್ಲಿ ಹೀರೋ ಸಚಿನ್ ಮಾತ್ರ ಇರಲಿದ್ದು, ಉಳಿದ ಪಾತ್ರವರ್ಗವೆಲ್ಲ ಪ್ರತ್ಯೇಕವಾಗಿರುತ್ತದೆ. ಆ ಪಾತ್ರಧಾರಿಗಳ ಆಯ್ಕೆ ಇನ್ನಷ್ಟೇ ಆಗಬೇಕಿರುವುದರಿಂದ ಶೂಟಿಂಗ್ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ ಎಂದು ಹೇಳುತ್ತಾರೆ ಶಾಹುರಾಜ್.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts