ಸಿನಿಮಾ

ಆದಿಪುರುಷ್​ ಚಿತ್ರದ ಬಹುನಿರೀಕ್ಷಿತ ‘ಜೈ ಶ್ರೀರಾಮ್​ ಹಾಡು’ ಬಿಡುಗಡೆ

ದೆಹಲಿ: ಪ್ರಭಾಸ್ ಮತ್ತು ಕೃತಿ ಸನೂನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಆದಿಪುರುಷ್​’ ಚಿತ್ರದ ಟ್ರೈಲರ್​ ಇತ್ತೀಚಿಗಷ್ಟೆ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಇಂದು ಈ ಚಿತ್ರದ ‘ಜೈ ಶ್ರೀ ರಾಮ್’ ಎಂಬ ಹಾಡು ಬಿಡುಗಡೆಯಾಗಿದೆ.

ನಟ ಪ್ರಭಾಸ್ ರಾಮನಾಗಿ ಹಾಗೂ ಕೃತಿ ಸನನ್ ಸೀತೆಯಾಗಿ ನಟಿಸುತ್ತಿರುವ ಆದಿಪುರುಷ್ ಚಿತ್ರದ ಬಹುನಿರೀಕ್ಷಿತ ಹಾಡು ಇದಾಗಿದ್ದು, ಈ ಹಾಡು ಕೆಲವು ಅದ್ಭುತ ವಿಎಫ್​ಎಕ್ಸ್​​ ಗ್ರಾಫಿಕ್ಸ್​ಗಳನ್ನು ಹೊಂದಿದೆ. ಅಲ್ಲದೇ ಮನಸ್ಸಿಗೆ ಮುದ ನೀಡುವ ಕೆಲವು ಉತ್ತಮ ದೃಶ್ಯಗಳನ್ನು ಹೊಂದಿದೆ.

ಇದನ್ನೂ ಓದಿ: ಗೆದ್ದ ಮೇಲೆ ಕಾರ್ಯಕರ್ತರನ್ನು ಅಭಿನಂದಿಸಿದ ಶಾಸಕ ದಿನಕರ

ಈ ಹಾಡಿನಲ್ಲಿ ಪ್ರಭಾಸ್ ರಾಘವನಾಗಿ ಕಾಣಿಸಿಕೊಂಡಿದ್ದು, ಹನುಮಾನ್ ಮತ್ತು ಅವನ ವಾನರ ಸೇನೆಯೊಂದಿಗೆ ಅಂತಿಮ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದು, ಸೀತೆ ಅಶೋಕ ವನದಲ್ಲಿ ಮರದ ಕೆಳಗೆ ಕುಳಿತು ತನ್ನನ್ನು ರಕ್ಷಿಸಲು ರಾಮ ಬರುವನೆಂದು ತಾಳ್ಮೆಯಿಂದ ಕಾಯುವುದನ್ನು ನೋಡಬಹುದಾಗಿದೆ. ಮತ್ತೊಂದೆಡೆ, ರಾವಣನ ವಿರುದ್ಧದ ಅಂತಿಮ ಯುದ್ಧಕ್ಕಾಗಿ ರಾಮ, ತನ್ನ ಸಹೋದರ ಹಾಗೂ ಹನುಮಾನ್​ ಜೊತೆ ಒಂದಾಗಿರುವುದನ್ನು ಕಾಣಬಹುದಾಗಿದೆ.

ಚಿತ್ರವು ಜೂನ್ 16 ರಂದು ಬಿಡುಗಡೆಗೆಯಾಗಲಿದ್ದು, ಚಿತ್ರತಂಡವು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ಹಾಡು ಬಿಡುಗಡೆ ಮಾಡಿದ್ದಾರೆ.(ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್