ದೇಶಹಳ್ಳಿಯಲ್ಲಿ ಆದಿಶಕ್ತಿ ಅಮ್ಮನವರ ಗಿಂಡಿ ಉತ್ಸವ

ಮದ್ದೂರು: ತಾಲೂಕಿನ ದೇಶಹಳ್ಳಿ ಗ್ರಾಮದ ಆದಿಶಕ್ತಿ ಅಮ್ಮನವರ 54ನೇ ವರ್ಷದ ಗಿಂಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಶುಕ್ರವಾರ ರಾತ್ರಿ ಮಡಿಲು ಅಕ್ಕಿ ಸೋಗಲು ಮಾಡುವ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಶನಿವಾರ ಬೆಳಗ್ಗೆ 5 ಗಂಟೆಗೆ ಗಿಂಡಿ ಉತ್ಸವದ ಅಂಗವಾಗಿ ಪೂಜಾ ಕುಣಿತ, ವಾದ್ಯ ಗೋಷ್ಠಿ ಸೇರಿ ಹಲವು ವಾದ್ಯಗಳ ನಡುವೆ ಗಿಂಡಿಯನ್ನು ತೆಲೆ ಮೇಲೆ ಹೊತ್ತು ದೇಗುಲದ ಪ್ರಧಾನ ಅರ್ಚಕ ರಾಮಣ್ಣ, ಸತ್ಯ ಅವರು ಗ್ರಾಮದ ವಿವಿಧ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು.

ಈ ವೇಳೆ ಭಕ್ತರು ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ನಂತರ ಮೆರವಣಿಗೆ ದೇಗುಲಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಹರಕೆ ಹೊತ್ತವರು ಬಾಯಿ ಬೀಗ, ತಂಬಿಟ್ಟಿನ ಆರತಿ ಮೂಲಕ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ವಾರ್ಷಿಕೋತ್ಸವದ ಅಂಗವಾಗಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ, ತೀರ್ಥ ಪ್ರಸಾದ ವಿತರಿಸಲಾಯಿತು.

Leave a Reply

Your email address will not be published. Required fields are marked *