ಮಾನ್ವಿ: ತುಂಗಭದ್ರಾ ಎಡದಂಡೆ ಮುಖ್ಯಕಾಲುವೆಯಿಂದ ಕೆಳ ಭಾಗಕ್ಕೆ ಸಮರ್ಪಕ ನೀರು ಹರಿಸುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಪಾಟೀಲ್ ಹೇಳಿದರು.
ತಾಲೂಕಿನ ನೀರಮಾನ್ವಿ ಗ್ರಾಮದಲ್ಲಿ ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕೊನೆಯ ಭಾಗದ ರೈತರು ಸಂಚಾರ ತಡೆ ನಡೆಸಿ ಮಾತನಾಡಿದರು.
ಇದನ್ನು ಓದಿ: ವಾಹನ ಸಂಚಾರ ತಡೆದು ಪ್ರತಿಭಟನೆ
ತುಂಗಭದ್ರಾ ಎಡದಂಡೆ ನಾಲೆಯ ಮುಖ್ಯ ಕಾಲುವೆಗೆ ನೀರು ಬಿಟ್ಟು 10-15 ದಿನ ಕಳೆದರೂ ಮೈಲ್ 69 ಮತ್ತು 104 ರಲ್ಲಿ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ತುಂಗಭದ್ರಾ ಎಡದಂಡೆ ನಾಲೆಯ 0 ದಿಂದ 69 ರವರೆಗೆ ಅಕ್ರಮ ನೀರಾವರಿ ತಡೆಯಬೇಕು. ಮೈಲ್ 69ರಲ್ಲಿ ಹೊಸ ಗೇಜ್ ಪ್ರಕಾರ ಹಾಗೂ ಮೈಲ್ 104 ರಲ್ಲಿ ನಿಗದಿತ ಗೇಜ್ ಪ್ರಕಾರ ನೀರು ನಿರ್ವಹಣೆಯಾಗಬೇಕು.
ಉಪಕಾಲುವೆ 76ರಲ್ಲಿ ಸೀಲ್ಡ್, ಜಂಗಲ್ ರಸ್ತೆ ಅಭಿವೃದ್ಧಿ ಪಡಿಸಬೇಕು. ಸಮಗ್ರವಾಗಿ ಕೊನೆಯ ಭಾಗದ ರೈತರಿಗೆ ನೀರು ನಿರ್ವಹಣೆ ಮಾಡಬೇಕು. ಉಪಕಾಲುವೆ 82ರಲ್ಲಿ ಸೀಲ್ಸ್, ಜಂಗಲ್ ರಸ್ತೆ, ಅಕ್ರಮವಾಗಿ ನೀರು ಪಡೆಯುತ್ತಿರುವುದನ್ನು ತಡೆಯುವುದು ವಾರಾಬಂದಿ ಪ್ರಕಾರ ಸಮಗ್ರವಾಗಿ ನೀರು ನಿರ್ವಹಣೆ ಮಾಡುವುದು ಹಾಗೂ ಮುಖ್ಯ ಕಾಲುವೆಯ ಅನುಗುಣವಾಗಿ ನಿಗದಿತ ಗೇಜ್ ಕಾಯ್ದುಕೊಳ್ಳುವುದು ಮತ್ತು ಖಾಯಂ ಗ್ಯಾಂಗ್‌ಮನ್ ಚಿದಾನಂದ ಇವರನ್ನು ಕೂಡಲೇ ಬೇರೆ ಕಡೆಗೆ ವರ್ಗಾಯಿಸಬೇಕು ಎಂದರು.
ಮೈಲ್ 85 ಮತ್ತು 89, 90, 92 ರಲ್ಲಿ ಸೀಲ್ಸ್, ಜಂಗಲ್ ರಸ್ತೆ ಜಮೀನುಗಳಿಗೆ ಸಮಗ್ರವಾಗಿ ನೀರು ಅಭಿವೃದ್ಧಿ ಪಡಿಸುವುದು ಹಾಗೂ ಕೊನೆಯ ಭಾಗದ ರೈತರ ನಿರ್ವಹಣೆ ಮಾಡಬೇಕು. ಸಿರವಾರ ವಿಭಾಗದ ಕಾಲುವೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಿಜಯಲಕ್ಷ್ಮೀ ಅವರು ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ವಿನಾ ಕಾರಣ ವಿವಾದ ಮಾಡಿಕೊಳ್ಳುತ್ತಾರೆ. ಇವರನ್ನು ಕೂಡಲೇ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಶ್ರೀ ರಾಮುಲು, ಮಲ್ಲಭದ್ರಗೌಡ, ಶಿವಪ್ಪಗೌಡ ಹಳ್ಳಿಹೊಸೂರು, ಚನ್ನಬಸವ ಬೆಟ್ಟದೂರು, ಸುರೇಶಗೌಡ ಬಲ್ಲಟಗಿ, ವೀರೇಶ ಗವಿಗಟ್, ಕೆ.ಮಲ್ಲಿಕಾರ್ಜುನ ಹರವಿ, ಡಿವೈಎಸ್ಪಿ ಬಿ.ಎಸ್.ತಳವಾರ, ತಹಸೀಲ್ದಾರ್ ರಾಜು ಪಿರಂಗಿ, ಪಿಐ ವೀರಭದ್ರಯ್ಯಸ್ವಾಮಿ, ಹಿರೇಕೊಟ್ನೆಕಲ್ ನೀರಾವರಿ ಇಲಾಖೆ ಎಇಇ ಶಾಂತರಾಜ ಇತರರಿದ್ದರು.