More

    ಸಮರ್ಪಕ ರಸ್ತೆ, ಒಳಚರಂಡಿ ಕಾಮಗಾರಿಗೆ ಆದ್ಯತೆ

    ಕುಂದಗೋಳ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಸುರಕ್ಷಿತ ರಸ್ತೆ ಹಾಗೂ ಒಳಚರಂಡಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.

    ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ 1 ಕೋಟಿ 20 ಲಕ್ಷ ರೂ. ಅನುದಾನದಲ್ಲಿ ಪಟ್ಟಣದ 10ನೇ ವಾರ್ಡ್ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಲಾದ ಕಾಮಗಾರಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಸಹಕಾರದೊಂದಿಗೆ ಈ ಕಾಮಗಾರಿಗಳಿಗೆ ವೇಗ ನೀಡಲಾಗಿದೆ. ಕಾಮಗಾರಿಗೆ ವಾರ್ಡ್‌ನ ಸದಸ್ಯರು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಕ್ಷೇತ್ರದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.

    ಪಪಂ ಸದಸ್ಯ ಮಂಜುನಾಥ ಹಿರೇಮಠ, ಗಣೇಶ ಕೋಕಾಟೆ, ಹನುಮಂತಪ್ಪ ರಣತೂರ, ವಾಗೀಶ ಗಂಗಾಯಿ, ದಿಲೀಪ ಕಲಾಲ, ಮಾಲತೇಶ ಶ್ಯಾಗೋಟಿ, ಬಸವರಾಜ ಕೊಪ್ಪದ, ಶಿವಣ್ಣ ಗಂಗಾಯಿ, ಬಸವರಾಜ ಬಾಳಿಕಾಯಿ, ಕಲ್ಲಪ್ಪ ಉಗರಗೋಳ, ಅಜ್ಜಪ್ಪ ಸುಬರಗಟ್ಟಿ, ಸಂಭಾಜಿ ತಡಸದ, ಬಸವರಾಜ ಮುದಗಣ್ಣವರ, ರಾಮಣ್ಣ ನೇಲಗುಡ್ಡ ಇತರರಿದ್ದರು.

    See also  ಸಮಸ್ಯೆ ಪರಿಹಾರಕ್ಕೆ ಚಿಂತಿಸಿ : ಅಧಿಕಾರಿಗಳಿಗೆ ಶಾಸಕ ಗುರುರಾಜ ಗಂಟಿಹೊಳೆ ಸೂಚನೆ ; ಮಳೆಗಾಲದ ಮುನ್ನೆಚ್ಚರಿಕೆಗೆ ನಿರ್ದೇಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts