ದೇವದುರ್ಗ: ಪಟ್ಟಣದ ಮೂರು ಕೇಂದ್ರಗಳಲ್ಲಿ ಭಾನುವಾರ ಆದರ್ಶ ವಿದ್ಯಾಲಯಗಳ ಪ್ರವೇಶ ಪರೀಕ್ಷೆ ಶಾಂತಿಯುತವಾಗಿ ನಡೆಯಿತು. ಕೇಂದ್ರಕ್ಕೆ ಬಿಇಒ ಕೆ.ಮಹಾದೇವಯ್ಯ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು.
ಬಿಇಒ ಕೆ.ಮಹಾದೇವಯ್ಯ ಮಾತನಾಡಿ, ಪಟ್ಟಣದ ಡಾನ್ ಬಾಸ್ಕೋ ಶಿಕ್ಷಣ ಸಂಸ್ಥೆ, ಸರ್ಕಾರಿ ಕನ್ಯಾ ಪ್ರೌಢಶಾಲೆ, ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೇಂದ್ರ ತೆರೆಯಲಾಗಿತ್ತು. ಪರೀಕ್ಷೆಗೆ 473 ಬಾಲಕರು, 442 ಬಾಲಕಿಯರು ಸೇರಿ 915 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.
ಅದರಲ್ಲಿ 424 ಬಾಲಕರು, 399 ಬಾಲಕಿಯರು ಸೇರಿ 823 ಮಕ್ಕಳು ಪರೀಕ್ಷೆ ಬರೆದಿದ್ದಾರೆ. 92 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಪರೀಕ್ಷೆಗೆ ಬಿಗಿಭದ್ರತೆ ಒಗಿಸುವ ಜತೆಗೆ ವಿಡಿಯೋ ರೇಕಾರ್ಡ್, ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ, ಡಯಟ್ ಉಪನ್ಯಾಸಕ ರಾಜೇಂದ್ರ, ಮುರಳೀಧರ್‌ರಾವ್ ಕುಲಕರ್ಣಿ, ಪರೀಕ್ಷೆ ಅಧೀಕ್ಷಕರಾದ ರಮೇಶ ಕಟ್ಟಮನಿ, ಮೃತ್ಯುಂಜಯ, ನಾಗರಾಜ ಪಾಟೀಲ್ ಇತರರಿದ್ದರು.