PHOTOS| ನಟಿ ಆದಾ ಶರ್ಮಾ ಉಟ್ಟಿರುವ ಸೀರೆಯಲ್ಲಿದೆ ವಿಶೇಷತೆ: ನಿಮಗೂ ಬೇಕಾದರೆ ಹೀಗೆ ಮಾಡಬೇಕಂತೆ?

ನವದೆಹಲಿ: ಬಾಲಿವುಡ್​ ಬೆಡಗಿ ಹಾಗೂ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ನಟಿ ಆದಾ ಶರ್ಮಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿತ್ತಾರೆ. ವಿಶೇಷವಾದ ಪ್ಯಾಷನ್​ ಟಿಪ್ಸ್​ ಮೂಲಕ ಮಹಿಳಾ ಅಭಿಮಾನಿಗಳನ್ನು ರಂಜಿಸುವ ಆದಾ ಹೊಸದಾದ ಚಮತ್ಕಾರದೊಂದಿಗೆ ಮರಳಿ ಬಂದಿದ್ದಾರೆ.

ಬಣ್ಣದ ಚಿತ್ತಾರಗಳಿರುವ ಸೀರೆಯನ್ನುಟ್ಟು ನಟಿ ಆದಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಉಟ್ಟಿರುವ ಸೀರೆ ವಿಶೇಷವಾಗಿದ್ದು, ಸೀರೆಯ ತುಂಬೆಲ್ಲ ಬಾಲಿವುಡ್​ ನಟಿಯರ ಮುಖದ ಚಿತ್ರಗಳಿವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳನ್ನು ಆದಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದು, ಸಾಕಷ್ಟು ವೈರಲ್​ ಆಗಿವೆ.

ಎಂಓಎಚ್​(MOH) ಎಂಬ ಶಾರ್ಟ್​ ಫಿಲ್ಮನಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ನಟಿ ಆದಾ ಅವರು ತಮಗೆ ವ್ಯಕ್ತವಾಗುತ್ತಿರುವ ಅಭಿಮಾನಗಳ ಬಗ್ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ನಿಮಗೆ ಈ ಸೀರೆ ಬೇಕಾದರೆ, ನಿಮಗ್ಯಾಕೆ ಈ ಸೀರೆ ಬೇಕು ಎಂದು ವಿಶೇಷವಾಗಿ ಕಾಮೆಂಟ್​ ಮಾಡುವವರಿಗೆ ಆಟೋಗ್ರಾಫ್​ ಮೂಲಕ ಸೀರೆಯನ್ನು ಕಳುಹಿಸಿಕೊಡುವುದಾಗಿ ಆದಾ ತಿಳಿಸಿದ್ದಾರೆ. ಪ್ರಶಸ್ತಿ ಸಮಾರಂಭವೊಂದಕ್ಕೆ ಈ ಸೀರೆಯನ್ನು ಉಟ್ಟಿರುವುದಾಗಿ ತಿಳಿಸಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ತುಂಬಾ ಪರಿಚಿತರಾಗಿರುವ ಆದಾ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರೊಂದಿಗೆ ರಣವಿಕ್ರಮ ಚಿತ್ರದಲ್ಲಿ ತೆರೆಹಂಚಿಕೊಳ್ಳುವ ಮೂಲಕ ಆದಾ ಅವರು ಕನ್ನಡಿಗರ ಮನವನ್ನು ಗೆದ್ದಿದ್ದಾರೆ. (ಏಜೆನ್ಸೀಸ್​)