Ronnyಯ ರಾಣಿಯರು ! ಕಿರಣ್​ ರಾಜ್​ಗೆ ನಾಯಕಿಯರಾಗಿ ರಾಧ್ಯಾ, ಸಮೀಕ್ಷಾ

| ಹರ್ಷವರ್ಧನ್​ ಬ್ಯಾಡನೂರು

ಗುರುತೇಜ್​ ಶೆಟ್ಟಿ ನಿರ್ದೇಶನದ, “ಕನ್ನಡತಿ’ ಧಾರಾವಾಹಿ ಖ್ಯಾತಿಯ ಕಿರಣ್​ ರಾಜ್​ ನಾಯಕನಾಗಿರುವ ಸಿನಿಮಾ “ರಾನಿ’. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, “ನಮ್ಮ ಹುಡುಗರು’, “ದೇಸಾಯಿ’ ನಟಿ ರಾಧ್ಯಾ ಮತ್ತು “ಮದುವೆ’, “ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಗಳು ಸೇರಿ “ದ ಟೆರರಿಸ್ಟ್​’, “99′ ಚಿತ್ರಗಳಲ್ಲಿ ಅಭಿನಯಿಸಿರುವ ಸಮೀಕ್ಷಾ ನಟಿಸಿದ್ದಾರೆ. “ರಾನಿ’ ಇದೇ ಶುಕ್ರವಾರ ತೆರೆಗೆ ಬರಲಿದ್ದು, ಅದೇ ಖುಷಿಯಲ್ಲಿ ರಾಧ್ಯಾ ಮತ್ತು ಸಮೀಕ್ಷಾ ತಮ್ಮ ಪಾತ್ರ ಮತ್ತು ಮುಂದಿನ ಸಿನಿಮಾಗಳ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ.

ಅಂಜಲಿಯಾದ ರಾಧ್ಯಾ
“ರಾನಿ’ಗೆ ಆಯ್ಕೆಯಾದ ಬಗ್ಗೆ ರಾಧ್ಯಾ, “”ನಮ್ಮ ಹುಡುಗರು’ ಬಳಿಕ ಸ್ವಲ್ಪ ಸಮಯ ತೆಗೆದುಕೊಂಡು ಒಳ್ಳೆ ಕಥೆ, ಪಾತ್ರಕ್ಕಾಗಿ ಎದುರು ನೋಡುತ್ತಿದ್ದೆ. ಆಗ ಮಾಸ್ತಿ ಸರ್​ “ರಾನಿ’ ಬಗ್ಗೆ ಹೇಳಿದರು. ಗುರು ಸರ್​ನ ಭೇಟಿಯಾಗಿ ಕಥೆ ಕೇಳಿದೆ. ಇಬ್ಬರು ನಾಯಕಿಯರಾದರೆ ಬೇಡ ಅಂದಿದ್ದೆ. ಆದರೆ, ಪಾತ್ರದ ಬಗ್ಗೆ ತಿಳಿದ ಬಳಿಕ ಒಪ್ಪಿಕೊಂಡೆ. ಮುಗ್ಧಳಾದರೂ ಪ್ರ್ಯಾಕ್ಟಿಕಲ್​ಆಗಿ ಯೋಚಿಸುವ ಅಂಜಲಿ ಪಾತ್ರ ನನ್ನದು. ಕಥೆ ಪ್ರಾರಂಭವಾಗುವುದು, ಅಂತ್ಯವಾಗುವುದು ನನ್ನ ಪಾತ್ರದಿಂದಲೇ. ಈ ಹಿಂದೆ ಉತ್ತರ ಕರ್ನಾಟಕ, ಮಂಡ್ಯ ಹುಡುಗಿಯಾಗಿ ನಟಿಸಿದ್ದೆ. “ರಾನಿ’ಯಲ್ಲಿ ಹೊಸ ಶೇಡ್​ನಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.

Ronnyಯ ರಾಣಿಯರು ! ಕಿರಣ್​ ರಾಜ್​ಗೆ ನಾಯಕಿಯರಾಗಿ ರಾಧ್ಯಾ, ಸಮೀಕ್ಷಾ
Ronnyಯ ರಾಣಿಯರು ! ಕಿರಣ್​ ರಾಜ್​ಗೆ ನಾಯಕಿಯರಾಗಿ ರಾಧ್ಯಾ, ಸಮೀಕ್ಷಾ 5

ಕನ್ನಡಕ್ಕೆ ಮೊದಲ ಆದ್ಯತೆ
ರಾಧ್ಯಾಗೆ ಪರಭಾಷೆಗಳಿಂದಲೂ ಅವಕಾಶ ಬಂದಿತ್ತಂತೆ. ಆದರೆ, ಕನ್ನಡದಲ್ಲೇ ನಟಿಸುವಾಸೆ ಅವರದು. “ಕೆಲ ದೊಡ್ಡ ಪ್ರಾಜೆಕ್ಟ್​ಗಳು ಬಂದಿದ್ದವು. ನಾಯಕಿಯ ಪಾತ್ರವಲ್ಲದ ಕಾರಣ ಒಪ್ಪಿಕೊಳ್ಳಲಿಲ್ಲ. ತಮಿಳು, ತೆಲುಗಿನಲ್ಲೂ ಅವಕಾಶ ಬಂದಿವೆ. ಆದರೆ, ಕನ್ನಡವೇ ನನಗೆ ಮೊದಲ ಆದ್ಯತೆ’ ಎನ್ನುತ್ತಾರೆ.

ಅಪ್ಪು ಅಭಿಮಾನಿ
ರಾಧ್ಯಾ ಪುನೀತ್​ ರಾಜಕುಮಾರ್​ ಅಭಿಮಾನಿ. ಪ್ರತಿದಿನ ವಾಟ್ಸಾಪ್​ ಸ್ಟೇಟಸ್​ನಲ್ಲಿ ಅಪ್ಪು ಫೋಟೋ ಹಂಚಿಕೊಳ್ಳುವ ಅವರು, “ಚಿಕ್ಕ ವಯಸ್ಸಿನಿಂದಲೂ ನಾನು ಅಪ್ಪು ಅಭಿಮಾನಿ. ನಾನು ಚಿತ್ರರಂಗಕ್ಕೆ ಬರಲು ಅವರೇ ಕಾರಣ. ಅವರ ಜತೆ ನಟಿಸುವುದಿರಲಿ, ನಾನವರನ್ನು ಭೇಟಿ ಕೂಡ ಆಗಿಲ್ಲ. ಆದರೆ, ಅವರ ನಗು ನೋಡಿದಾಗ ಪಾಸಿಟಿವಿಟಿ ಬರುತ್ತದೆ. ಹೀಗಾಗಿಯೇ ಪ್ರತಿದಿನ ವಾಟ್ಸಾಪ್​ ಸ್ಟೇಟಸ್​ನಲ್ಲಿ ಅಪ್ಪು ಫೋಟೋ, ವಿಡಿಯೋ ಹಂಚಿಕೊಳ್ಳುತ್ತೇನೆ. ಪ್ರತಿದಿನ ದೇವರನ್ನು ನೋಡುವಂತೆಯೇ ಅವರನ್ನೂ ನೋಡುತ್ತೇನೆ’ ಎನ್ನುತ್ತಾರೆ.

Ronnyಯ ರಾಣಿಯರು ! ಕಿರಣ್​ ರಾಜ್​ಗೆ ನಾಯಕಿಯರಾಗಿ ರಾಧ್ಯಾ, ಸಮೀಕ್ಷಾ
Ronnyಯ ರಾಣಿಯರು ! ಕಿರಣ್​ ರಾಜ್​ಗೆ ನಾಯಕಿಯರಾಗಿ ರಾಧ್ಯಾ, ಸಮೀಕ್ಷಾ 6

ಮುಗ್ಧ ಹುಡುಗಿ ಸಮೀಕ್ಷಾ
ಈಗಾಗಲೇ ಕಿರುತೆರೆಯಲ್ಲಿ ಛಾಪು ಮೂಡಿಸಿರುವ ಸಮೀಕ್ಷಾ “ರಾನಿ’ಯಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. “ಜೈನ್​ ಹುಡುಗಿ ಪಾತ್ರ. ನನ್ನ ಪಾತ್ರಕ್ಕೆ ದೈಹಿಕವಾಗಿ ಸಿದ್ಧತೆ ಬೇಕಿರಲಿಲ್ಲ. ಆದರೆ, ಪಾತ್ರಕ್ಕೆ, ಪರಿಸರಕ್ಕೆ ಮಾನಸಿಕವಾಗಿ ಸಿದ್ಧತೆ ಬೇಕಿತ್ತಷ್ಟೇ. ತಂಡದ ಎಲ್ಲರಿಗೂ ಚಿತ್ರದ ಮೇಲೆ ತುಂಬ ನಿರೀಕ್ಷೆಯಿದೆ. ಹೀಗಾಗಿ ಕಲಾವಿದರಾಗಿ ನಮ್ಮ ಮೇಲೂ ಚೆನ್ನಾಗಿ ಪಾರ್ಮ್​ರ್ ಮಾಡುವ ಜವಾಬ್ದಾರಿಯಿತ್ತು’ ಎಂದು ಹೇಳಿಕೊಳ್ಳುತ್ತಾರೆ.

Ronnyಯ ರಾಣಿಯರು ! ಕಿರಣ್​ ರಾಜ್​ಗೆ ನಾಯಕಿಯರಾಗಿ ರಾಧ್ಯಾ, ಸಮೀಕ್ಷಾ
Ronnyಯ ರಾಣಿಯರು ! ಕಿರಣ್​ ರಾಜ್​ಗೆ ನಾಯಕಿಯರಾಗಿ ರಾಧ್ಯಾ, ಸಮೀಕ್ಷಾ 7

ಓಡುತ್ತಲೇ ಸವಾಲಿನ ಫೈಟ್​!
“ರಾನಿ’ ಶೂಟಿಂಗ್​ ವೇಳೆ ಸಮೀಕ್ಷಾಗೆ ಫೈಟ್​ ಸನ್ನಿವೇಶಗಳು ತುಂಬ ಸವಾಲಾಗಿತ್ತಂತೆ. ಆ ಬಗ್ಗೆ, “ಕಾಲೇಜ್​ ಸೀಕ್ವೆನ್ಸ್​ನಲ್ಲಿ ಫೈಟ್​ ಸ್ವಲ್ಪ ರಿಸ್ಕಿ ಅಂತನ್ನಿಸಿತ್ತು. ಆದರೆ, ನಂದಿ ಬೆಟ್ಟದಲ್ಲಿ ನಡೆಯುವ ಇನ್ನೊಂದು ಫೈಟ್​ ತುಂಬ ರಿಸ್ಕಿ ಇತ್ತು. ಬೆಟ್ಟದ ಇಳಿಜಾರಿನಲ್ಲಿ ಫೈಟ್​ ಶೂಟ್​ ಮಾಡುವಾಗ, ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಬಿದ್ದುಬಿಡುತ್ತಿದ್ದೆವು’ ಎನ್ನುತ್ತಾರೆ. ಅಂದಹಾಗೆ ಸಮೀಾಗೆ ಪರಭಾಷೆಗಳಿಂದಲೂ ಅವಕಾಶಗಳು ಬರುತ್ತಿವೆಯಂತೆ. “ನನಗೆ ಸದ್ಯ ಬೇರೆ ಭಾಷೆಗಳಿಗೆ ಹೋಗಬೇಕು ಅಂತನ್ನಿಸುತ್ತಿಲ್ಲ. ಧಾರಾವಾಹಿಗಳಲ್ಲಿ ನೆಗೆಟಿವ್​, ಲೀಡ್​, ದ್ವಿಪಾತ್ರ, ಮಾಡರ್ನ್​ ಹುಡುಗಿಯಾಗಿ ಹಲವು ಪಾತ್ರ ಮಾಡಿದ್ದೇನೆ. ಸಿನಿಮಾದಲ್ಲೂ ಎಲ್ಲ ರೀತಿಯ ಪಾತ್ರಗಳಲ್ಲೂ ನಟಿಸುವಾಸೆ’ ಎನ್ನುವ ಸಮೀಕ್ಷಾ ಸದ್ಯ ಶಶಿಕುಮಾರ್​ ಪುತ್ರ ಆದಿತ್ಯ ಜತೆ ಒಂದು ರೊಮ್ಯಾಂಟಿಕ್​ ಡ್ರಾಮಾ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Ronnyಯ ರಾಣಿಯರು ! ಕಿರಣ್​ ರಾಜ್​ಗೆ ನಾಯಕಿಯರಾಗಿ ರಾಧ್ಯಾ, ಸಮೀಕ್ಷಾ
Ronnyಯ ರಾಣಿಯರು ! ಕಿರಣ್​ ರಾಜ್​ಗೆ ನಾಯಕಿಯರಾಗಿ ರಾಧ್ಯಾ, ಸಮೀಕ್ಷಾ 8
Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…