‘ಫಿಯರ್’ ವೇದಿಕಾ: ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ನಟ ಪ್ರಭುದೇವ

ಬೆಂಗಳೂರು: ಕನ್ನಡದ ‘ಸಂಗಮ’, ‘ಶಿವಲಿಂಗ’ ‘ಹೋಮ್ ಮಿನಿಸ್ಟರ್’ ಸೇರಿ ತೆಲುಗು, ಮಲಯಾಳಂ, ಹಿಂದಿ ಹಾಗೂ ತಮಿಳಿನ ಹಲವು ಸಿನಿಮಾಗಳಲ್ಲಿ ವೇದಿಕಾ ನಟಿಸಿದ್ದಾರೆ. ಇದೀಗ ಅವರು ನಟಿಸಿರುವ ‘ಫಿಯರ್’ ಎಂಬ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಇತ್ತೀಚೆಗಷ್ಟೆ ನಟ, ನಿರ್ದೇಶಕ ಪ್ರಭುದೇವ ಚಿತ್ರದ ಫಸ್ಟ್ ಲುಕ್ ಪ್ರಭುದೇವ ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಕತ್ತಲ ಕೋಣೆಯಲ್ಲಿ ನಾಯಕಿ ವೇದಿಕಾ ಭಯಭೀತರಾಗಿ ಕುಳಿತಿರುವ ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಮೂಡಿಸಿದೆ. ‘ಫಿಯರ್’ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಹರಿತಾ ಗೋಗಿನೇನಿ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ನಟ ಅರವಿಂದ ಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಯಪ್ರಕಾಶ್ (ಜೆಪಿ), ಪವಿತ್ರಾ ಲೋಕೇಶ್, ಅನೀಶ್ ಕುರುವಿಲ್ಲ, ಸಯಾಜಿ ಶಿಂಧೆ, ಸತ್ಯಕೃಷ್ಣ ತಾರಾಗಣದಲ್ಲಿದ್ದಾರೆ. ಅನೂಪ್ ರೂಬೆನ್ಸ್ ಸಂಗೀತ, ಆ್ಯಂಡ್ರ್ಯೂ ಛಾಯಾಗ್ರಹಣ, ವಿಶಾಲ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ‘ಫಿಯರ್’ ಜತೆಗೆ ವೇದಿಕಾ ಕನ್ನಡದ ‘ಗಣ’ ಸಿನಿಮಾದಲ್ಲೂ ನಟಿಸಿದ್ದಾರೆ

Share This Article

ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡ್ರೆ ಏನು ಮಾಡ್ಬೇಕು? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​ | Fish

ಮೀನು ( Fish ) ಗಳು ಅನೇಕ ಜನರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಮೀನು ಆರೋಗ್ಯಕ್ಕೆ…

ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಸ್ಕ್ರೋಲಿಂಗ್ ಮಾಡ್ತೀರಾ?  ಇದ್ರಿಂದಲೇ ಗೊತ್ತಾಗುತ್ತದೆ ನಿಮ್ಮ Personality traits…

ಬೆಂಗಳೂರು:  ಈಗ  ಕೆಲವು ಅಧ್ಯಯನಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು (Personality traits ) ಹುಟ್ಟಿದ ದಿನಾಂಕ, ಕಣ್ಣಿನ…

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…