ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಳ್ಳುವ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ತಾರಾ ದಂಪತಿಯು ಜುಲೈ 23ರಂದು ಮುಂಬೈನಲ್ಲಿ ಸರಳವಾಗಿ ಮದುವೆಯಾಗಿದ್ದರು. ಬಳಿಕ ಜಾಲತಾಣದಲ್ಲಿ ೆಟೋಗಳ ಮೂಲಕ ದಾಂಪತ್ಯ ಬದುಕಿನ ಖುಷಿಯನ್ನು ಹಂಚಿಕೊಳ್ಳುತ್ತಿದ್ದರು. ಇದೀಗ, ಮದುವೆಯಾದ ಹೊಸತರಲ್ಲಿಯೇ ಈ ದಂಪತಿ ತಮ್ಮ ಕನಸಿನ ಮನೆಯನ್ನು ಮಾರಾಟಕ್ಕಿಟ್ಟಿರುವ ಬಗ್ಗೆ ಸುದ್ದಿಯಾಗಿದೆ. ಹೌದು, ಸೋನಾಕ್ಷಿ ಸಿನ್ಹಾ ಮುಂಬೈನ ಬಾಂದ್ರಾದ ಅಪಾರ್ಟ್‌ಮೆಂಟ್‌ನ ಮನೆಯನ್ನು ಮಾರಾಟಕ್ಕಿಟಿದ್ದಾರಂತೆ. ಪಶ್ಚಿಮ ಬಾಂದ್ರಾದಲ್ಲಿರುವ 2 ಬಿಎಚ್‌ಕೆಯ ಸುಮಾರು 4200 ಸ್ಕ್ವೇರ್ ಫೀಟ್ ಮನೆಯನ್ನು 25 ಕೋಟಿ ರೂ.ಗೆ ಸೇಲ್ ಮಾಡಲು ಮುಂದಾಗಿದ್ದಾರೆ. ಮನೆಯ ಸಂಪೂರ್ಣವಾಗಿ ವಿಡಿಯೋವನ್ನು ದಲ್ಲಾಳಿಗಳ ಮೂಲಕ ಜಾಲತಾಣದಲ್ಲಿ ಹಂಚಿಕೊಂಡು ಮಾರಾಟಕ್ಕಿದೆ ಎಂದು ತಿಳಿಸಿದ್ದಾರೆ. ನಟಿಯ ನೆಚ್ಚಿನ ಮನೆಯಲ್ಲಿ ಇದು ಒಂದಾಗಿತ್ತು. ಮದುವೆ ಬಳಿಕ ಹಲವು ಬಾರಿ ಇದೇ ಮನೆಯಲ್ಲಿ ಸೋನಾಕ್ಷಿ ೆಟೋಶೂಟ್ ಮಾಡಿಸಿದ್ದರು. ಸೋನಾಕ್ಷಿ ಈ ಮನೆಯನ್ನು 2020ರಲ್ಲಿ ಖರೀದಿಸಿದ್ದರು. ಕಳೆದ ವರ್ಷ ಇದೇ ಅಪಾರ್ಟ್‌ಮೆಂಟ್‌ನಲ್ಲಿ ಇನ್ನೊಂದು ಮನೆಯನ್ನು 15 ಕೋಟಿ ರೂ. ಖರೀದಿಸಿದ್ದರು. ಸೋನಾಕ್ಷಿ ವೆಬ್ ಸರಣಿ ‘ಹೀರಾಮಂಡಿ-2’ನಲ್ಲಿ ಸದ್ಯ ಬಿಜಿ ಇದ್ದಾರೆ. -ಏಜೆನ್ಸೀಸ
ಮದುವೆ ಬಳಿಕ ಮನೆ ಮಾರಾಟಕ್ಕಿಟ್ಟ ನಟಿ ಸೋನಾಕ್ಷಿ ಸಿನ್ಹಾ

You Might Also Like
ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt
salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…
ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts
gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…
ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream
ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…