More

    ನಳಪಾಕದಲ್ಲಿ ಭೂರಿ ಭೋಜನ!: ನಟಿ ಶುಭಾ ಪೂಂಜಾ ಚಾಲನೆ, ಸುಗ್ಗಿಹಬ್ಬದ ವಿಶೇಷ

    ಬೆಂಗಳೂರು: ಭೋಜನ ಪ್ರಿಯರ ಅಚ್ಚುಮೆಚ್ಚಿನ ತಾಣ ಹೋಟೆಲ್ ನಳಪಾಕದಲ್ಲಿ ಸಂಕ್ರಾಂತಿ ಹಬ್ಬಕ್ಕೂ ಮುನ್ನವೇ ಸುಗ್ಗಿಹಬ್ಬದ ವಿಶೇಷ ಭೋಜನದ ಘಮ ಬರಲಾರಂಭಿಸಿದೆ. ಜ.15ರವರೆಗೆ ಹಬ್ಬದ ವಿಶೇಷ ಭೋಜನ ಸವಿಯಬಹುದು ಎಂದು ಹೋಟೆಲ್​ನ ವ್ಯವಸ್ಥಾಪಕ ಲಿಂಗಯ್ಯ ಕಾಡದೇವರಮಠ ತಿಳಿಸಿದ್ದಾರೆ.

    ತಾರಾ ಮೆರುಗು: ಹೋಟೆಲ್ ನಳಪಾಕದಲ್ಲಿ ಸೋಮ ವಾರ ಆಯೋಜನೆಗೊಂಡಿದ್ದ ಕಾರ್ಯ ಕ್ರಮದಲ್ಲಿ ಚಿತ್ರನಟಿ ಶುಭಾ ಪೂಂಜಾ, ರೈಮ್್ಸ ಚಿತ್ರದ ನಾಯಕ ನಟ ಅಜಿತ್ ಜೈರಾಜ್, ದಿಯಾ ಚಿತ್ರದ ನಾಯಕನಟ ದೀಕ್ಷಿತ್ ಶೆಟ್ಟಿ, ಸಾಗುವ ದೂರದೂರ ಚಿತ್ರದ ನಾಯಕ ನಟ ಮಹೇಶ್, ನಿರ್ವಪಕ ಅಮಿತ್ ಪೂಜಾರಿ, ನಟ-ನಿರ್ದೇಶಕ ರವಿ ತೇಜಾ ಸಂಕ್ರಾಂತಿ ಸ್ಪೆಷಲ್ ಭೋಜನಕ್ಕೆ ಚಾಲನೆ ನೀಡಿದರು.

    2 ದಶಕದಿಂದ ಸೇವೆ: ಬೆಂಗಳೂರಿನ ಹೃದಯ ಭಾಗ ರಾಜಾಜಿನಗರದಲ್ಲಿ ಎರಡು ದಶಕದ ಹಿಂದೆ ಆರಂಭವಾದ ಹೋಟೆಲ್ ನಳಪಾಕ ಇಂದಿನವರೆಗೂ ಶುಚಿ, ರುಚಿ ಮತ್ತು ಗುಣಮಟ್ಟದ ಆಹಾರಕ್ಕೆ ಪ್ರಸಿದ್ಧವಾಗಿದೆ. ಉತ್ತರ ಕರ್ನಾಟಕ ಶೖಲಿಯ ಭೋಜನಕ್ಕೆ ಮೆಚ್ಚಿನ ತಾಣ ಎನಿಸಿಕೊಂಡಿದೆ.

    ಸ್ಪೆಷಲ್ ಊಟದ ಮೆನು

    ಬಾಳೆಎಲೆಯ ಊಟ. ಬಿಸಿಬಿಸಿ ಜೋಳದ ರೊಟ್ಟಿ, ತುಪ್ಪ, ಬೇಳೆ ಹೋಳಿಗೆ/ಶೇಂಗಾ ಹೋಳಿಗೆ ತುಪ್ಪ, ಬಿಳಿ ಹೋಳಿಗೆ, ಗಸಗಸೆ ಪಾಯಸ, 3 ರೀತಿಯ ಖಾರದ ಚಟ್ನಿಪುಡಿಗಳು, ಎಣ್ಣೆಗಾಯಿ ಪಲ್ಯದ ಜತೆಗೆ 3 ರೀತಿಯ ಪಲ್ಯಗಳು, ಕೋಸಂಬರಿ, ಕಲರ್ ರೈಸ್, ಚಿತ್ರಾನ್ನ, ಪುಳಿಯೊಗರೆ, ಸಲಾಡ್, ಅನ್ನ, ಹೋಳಿಗೆ ಸಾರು, ರಸಂ, ಮಿರ್ಚಿ ಫ್ರೈ, ಮಿರ್ಚಿ ಬಜ್ಜಿ, ಹಪ್ಪಳ, ಮೊಸರು, ಮಜ್ಜಿಗೆ ಕೊಡಲಾಗುತ್ತದೆ. ಎಷ್ಟು ಬೇಕಾದರೂ ಹಾಕಿಸಿಕೊಂಡು ತಿನ್ನಬಹುದು ಎಂದು ಲಿಂಗಯ್ಯ ಕಾಡದೇವರಮಠ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts