ಶ್ರುತಿ ಎಂಬ ಲೇಡಿ ವಿಲನ್; ನಾಯಕಿಯನ್ನು ಹೀಗೂ ತೋರಿಸುವ ಪ್ರಯತ್ನ..

‘ಹಲವು ನಿರ್ದೇಶಕರು ಹಲವು ಹೀರೋಗಳನ್ನು ಹುಟ್ಟುಹಾಕಿದ್ದಾರೆ. ವಿಲನ್​ಗಳನ್ನು ಯಾರಾದರೂ ಹುಟ್ಟುಹಾಕುತ್ತಾರೆ ಎಂದರೆ ಅದು ಹರ್ಷ ಮಾತ್ರ …’ ಶ್ರುತಿ ಹಾಗೆ ಹೇಳುವುದಕ್ಕೂ ಕಾರಣವಿದೆ. ಹೊಸಹೊಸ ವಿಲನ್​ಗಳನ್ನು ಪರಿಚಯ ಮಾಡುವುದರಲ್ಲಿ ಹರ್ಷ ಬಹಳ ಜನಪ್ರಿಯರು. ‘ಭಜರಂಗಿ 2’ ಚಿತ್ರದ ಮೂಲಕ ಅವರು ಮೂವರು ಹೊಸ ವಿಲನ್​ಗಳನ್ನು ಪರಿಚಯ ಮಾಡಿದ್ದಾರೆ. ಅದರ ಜತೆಗೆ, ನಾಯಕಿಯಾಗಿದ್ದ ಶ್ರುತಿ ಅವರನ್ನೂ ವಿಲನ್ ಆಗಿ ಪರಿಚಯಿಸುತ್ತಿದ್ದಾರೆ. ವಿಭಿನ್ನ ಗೆಟಪ್, ಕೈಯಲ್ಲೊಂದು ಚುಟ್ಟ, ಹೆದರಿಸುವಂತಹ ಮುಖಭಾವ … ನಿಜಕ್ಕೂ ಅದು ಶ್ರುತಿ ಅವರೇನಾ? ಎಂದು ಪ್ರಶ್ನಿಸುವಂತಿದೆ. … Continue reading ಶ್ರುತಿ ಎಂಬ ಲೇಡಿ ವಿಲನ್; ನಾಯಕಿಯನ್ನು ಹೀಗೂ ತೋರಿಸುವ ಪ್ರಯತ್ನ..