ಸಮಂತಾ ಲೈಫಲ್ಲೊಂದು ದಿನ ; ತಮ್ಮ ದೈನಂದಿನ ಬದುಕಿನ ಝಲಕ್​ ನೀಡಿದ ಟಾಲಿವುಡ್​ ನಟಿ

ಕಳೆದ ವರ್ಷ ಬ್ಯಾಕ್​ ಟು ಬ್ಯಾಕ್​ “ಶಾಕುಂತಲಂ’ ಮತ್ತು “ಖುಷಿ’ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಸಮಂತಾ ಸದ್ಯ “ಸಿಟಡೆಲ್​: ಹನಿ ಬನ್ನಿ’ ವೆಬ್​ಸರಣಿಯಲ್ಲಿ ಬಿಜಿಯಾಗಿದ್ದಾರೆ. ಅದರ ನಡುವೆಯೂ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಮಂತಾಗೆ ಹಲವಾರು ಅಭಿಮಾನಿಗಳು “ನಿಮ್ಮ ದೈನಂದಿನ ಬದುಕು ಹೇಗಿರುತ್ತೆ?’ ಎಂದು ಕೇಳುತ್ತಿದ್ದರು. ಅವರಿಗೆ ಒಂದು ವಿಡಿಯೋ ಝಲಕ್​ ಮೂಲಕ ಉತ್ತರಿಸಿರುವ ಸಮಂತಾ, ತಮ್ಮ ರೂಟೀನ್​ ಹೇಗಿರುತ್ತದೆ ಎಂಬುದರ ಬಗ್ಗೆ ಉತ್ತರಿಸಿದ್ದಾರೆ.

ಸಮಂತಾ ಲೈಫಲ್ಲೊಂದು ದಿನ ; ತಮ್ಮ ದೈನಂದಿನ ಬದುಕಿನ ಝಲಕ್​ ನೀಡಿದ ಟಾಲಿವುಡ್​ ನಟಿ
ಸಮಂತಾ ಲೈಫಲ್ಲೊಂದು ದಿನ ; ತಮ್ಮ ದೈನಂದಿನ ಬದುಕಿನ ಝಲಕ್​ ನೀಡಿದ ಟಾಲಿವುಡ್​ ನಟಿ 4

ಅದರಂತೆ ಸಮಂತಾ ಪ್ರತಿದಿ ಬೆಳಗ್ಗೆ 6 ಗಂಟೆಗೆ ಇದ್ದು, 6.30ಕ್ಕೆ ಸೂರ್ಯನ ಬೆಳಕಿನಲ್ಲಿ ನಿಲ್ಲುತ್ತಾರಂತೆ. ಬಳಿಕ ಆಯಿಲ್​ ಪುಲ್ಲಿಂಗ್​ ಮತ್ತು ಚೀನಾದ ಸಾಂಪ್ರದಾಯಿಕ ಚಿಕಿತ್ಸಾ ವಿಧಾನವಾದ ಗುವ ಶಾ (ಸುಕ್ಕು ಬಾರದಂತೆ ತ್ವಚೆಯ ಸೌಂದರ್ಯ ಕಾಪಾಡಲು ನುಣುಪಾದ ಕಲ್ಲಿನಿಂದ ಮೃದುವಾಗಿ ಮುಖ ಉಜ್ಜುವುದು) ಮಾಡುತ್ತಾರೆ. ನಂತರ 7 ಗಂಟೆಗೆ ಜಿಮ್​ನಲ್ಲಿ ವರ್ಕೌಟ್​ ಮಾಡುವುದು, ಬಳಿಕ ಮನೆಗೆ ವಾಪಸಾಗಿ ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಿ ಕೈಮುಗಿದು, ತಿಂಡಿ ಸೇವಿಸಿ, ರೆಡಿಯಾಗಿ 9 ಗಂಟೆಗೆ ಸರಿಯಾಗಿ ಸೆಟ್​ಗೆ ತೆರಳುತ್ತಾರಂತೆ.

ಸಮಂತಾ ಲೈಫಲ್ಲೊಂದು ದಿನ ; ತಮ್ಮ ದೈನಂದಿನ ಬದುಕಿನ ಝಲಕ್​ ನೀಡಿದ ಟಾಲಿವುಡ್​ ನಟಿ
ಸಮಂತಾ ಲೈಫಲ್ಲೊಂದು ದಿನ ; ತಮ್ಮ ದೈನಂದಿನ ಬದುಕಿನ ಝಲಕ್​ ನೀಡಿದ ಟಾಲಿವುಡ್​ ನಟಿ 5

ಬಳಿಕ ಮೇಕಪ್​ಗೂ ಮುನ್ನ ಐಸ್​ ಕ್ಯೂಬ್​ ಇರುವ ನೀರಿನಲ್ಲಿ ಮುಖ ತೊಳೆಯುವುದು. ಸಂಜೆ 5.30ರವರೆಗೆ ಶೂಟಿಂಗ್​ನಲ್ಲಿ ಭಾಗಿಯಾಗಿ ನಂತರ 6 ಗಂಟೆಗೆ ರೆಡ್​ ಲೈಟ್​ ಥೆರಪಿ ತೆಗೆದುಕೊಳ್ಳುವುದು, 7 ಗಂಟೆಗೆ ಸ್ನೇಹಿತರ ಜತೆ ಪಿಕಲ್​ ಬಾಲ್​ ಆಡುವುದು, ನಂತರ ಮನೆಗೆ ಬಂದು ಊಟ ಮಾಡಿ, ರಾತ್ರಿ 9.30ಕ್ಕೆ ಅರ್ಧ ಗಂಟೆ ಧ್ಯಾನ ಮಾಡಿ 10 ಗಂಟೆಗೆ ನಿದ್ರೆಗೆ ಜಾರುವುದು ತಮ್ಮ ರೂಟೀನ್​ ಎಂದು ವಿಡಿಯೋ ಮೂಲಕ ಸಮಂತಾ ಹೇಳಿಕೊಂಡಿದ್ದಾರೆ. -ಏಜೆನ್ಸೀಸ್​

ಸಮಂತಾ ಲೈಫಲ್ಲೊಂದು ದಿನ ; ತಮ್ಮ ದೈನಂದಿನ ಬದುಕಿನ ಝಲಕ್​ ನೀಡಿದ ಟಾಲಿವುಡ್​ ನಟಿ
ಸಮಂತಾ ಲೈಫಲ್ಲೊಂದು ದಿನ ; ತಮ್ಮ ದೈನಂದಿನ ಬದುಕಿನ ಝಲಕ್​ ನೀಡಿದ ಟಾಲಿವುಡ್​ ನಟಿ 6
Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…