ಶೂಟಿಂಗ್ ವೇಳೆ ಎಡವಟ್ಟು, ನಟಿ ರಾಗಿಣಿ ದ್ವಿವೇದಿಗೆ ಪೆಟ್ಟು!

ಬೆಂಗಳೂರು: ತುಪ್ಪದ ಬೆಡಗಿ ನಟಿ ರಾಗಿಣಿಗೆ ಶೂಟಿಂಗ್ ವೇಳೆ ಪೆಟ್ಟಾಗಿದ್ದು, ವೈದ್ಯರ ಸಲಹೆಯಂತೆ ಸದ್ಯ ಬೆಡ್​ ರೆಸ್ಟ್​ನಲ್ಲಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಚಿತ್ರದ ಶೂಟಿಂಗ್​ ಸಮಯದಲ್ಲಿ ಅವರಿಗೆ ಈ ಏಟು ಬಿದ್ದಿದೆ. ಪರಿಣಾಮವಾಗಿ, ರಾಗಿಣಿಯ ಎಡಗೈಗೆ ಪೆಟ್ಟಾಗಿದೆ. ಚಿತ್ರವೊಂದರಲ್ಲಿ ಕಮಾಂಡೋ ಆಫೀಸರ್ ಪಾತ್ರದಲ್ಲಿ ನಟಿಸುತ್ತಿರುವ ರಾಗಿಣಿ, ಅದಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಆಗ ಆದ ಎಡವಟ್ಟಿನಿಂದ ಎಡಗೈಗೆ ಪೆಟ್ಟಾಗಿದೆ. ತಕ್ಷಣ ಅವರನ್ನು ವೈದ್ಯರು ತಪಾಸಣೆ ನಡೆಸಿದ್ದು, ನಾಲ್ಕು ದಿನಗಳ ಕಾಲ ರೆಸ್ಟ್ ಪಡೆಯಲು ಹೇಳಿದ್ದಾರಂತೆ. ಹೀಗಾಗಿ … Continue reading ಶೂಟಿಂಗ್ ವೇಳೆ ಎಡವಟ್ಟು, ನಟಿ ರಾಗಿಣಿ ದ್ವಿವೇದಿಗೆ ಪೆಟ್ಟು!