ಬೆಂಗಳೂರು: ( Ragini Dwivedi ) ಸಾರ್ವಜನಿಕ ಸ್ಥಳದಲ್ಲಿ ಕೈಹಿಡಿದು ಎಳೆದ ಯುವಕನೊಬ್ಬನಿಗೆ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಕೆನ್ನೆಗೆ ಬಾರಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಟಿ ರಾಗಿಣಿ ದ್ವಿವೇದಿ ಅವರು ಇವೆಂಟ್‌ವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಇದೇ ವೇಳೆ ಅಭಿಮಾನಿಯೊಬ್ಬ ಏಕಾಏಕಿ ನಟಿ ರಾಗಿಣಿ ದ್ವಿವೇದಿ ಅವರ ಕೈಯನ್ನು ಹಿಡಿದುಕೊಂಡಿದ್ದಾನೆ.
ಸಿಟ್ಟಾಗಿದ್ದ ನಟಿ ರಾಗಿಣಿ ಆತನ ಕೆನ್ನೆಗೆ ಬಾರಿಸಿದ್ದಾರೆ. ಎಲ್ಲರ ಮುಂದೆ ಆ ಅಭಿಮಾನಿ ಮೇಲೆ ಸಿಟ್ಟಾಗಿ ಬೈದಿದ್ದಾರೆ. ನಂತರ ಅಲ್ಲಿನ ಸಿಬ್ಬಂದಿ ಆತನನ್ನು ಬೇರೆ ಕಡೆ ಕರೆದುಕೊಂಡು ಹೋಗಿದ್ದಾರೆ.
ರಾಗಿಣಿ ದ್ವಿವೇದಿ ಅಭಿಮಾನಿಗೆ ಹೊಡೆದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
TAGGED:Ragini Dwivedi